HEALTH TIPS

ವನ್ಯಜೀವಿಗಳ ರಕ್ಷಣೆಗೆ ವಂತಾರಾದೊಂದಿಗೆ ಕೈಜೋಡಿಸಿದ ಇಂಡೊನೇಷ್ಯಾ

ಅಹಮದಾಬಾದ್: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಸ್ಥಾಪಿಸಿದ ಜಾಗತಿಕ ವನ್ಯಜೀವಿ ಸಂಸ್ಥೆ 'ವಂತಾರಾ' ಮತ್ತು ಇಂಡೊನೇಷ್ಯಾ ದ 'ಪಿಟಿ ಫೌನಾ ಲ್ಯಾಂಡ್ ಗ್ರೂಪ್' ಸಹಯೋಗದಲ್ಲಿ ಇಂಡೊನೇಷ್ಯಾ ದಲ್ಲಿರುವ ವನ್ಯಜೀವಿಗಳ ಆರೋಗ್ಯ ಮತ್ತು ಸ್ಥಳೀಯ ಪ್ರಾಣಿಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.


ಈ ಬಗ್ಗೆ ಜಕಾರ್ತಾದಲ್ಲಿ ಮಾತನಾಡಿರುವ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ, 'ವನ್ಯಜೀವಿ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ. ವಂತಾರಾ ಸಂಸ್ಥೆಯು ತನ್ನ ಅನುಭವ, ಸಂಪನ್ಮೂಲಗಳ ಮೂಲಕ ನಮಗೆ ಬೆಂಬಲ ನೀಡುತ್ತಿದೆ. ಈ ಸಹಭಾಗಿತ್ವದ ಅಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳನ್ನು ಇಂಡೊನೇಷ್ಯಾ ಸರ್ಕಾರವೇ ವಹಿಸಿಕೊಂಡು ನಿರ್ವಹಿಸಲಿದೆ' ಎಂದು ಹೇಳಿದ್ದಾರೆ.

ಈ ಯೋಜನೆ ಅಡಿಯಲ್ಲಿ ಆನೆಗಳ ಆರೈಕೆದಾರರು ಹಾಗೂ ಪಶುವೈದ್ಯರಿಗೆ ತರಬೇತಿ, ಸಂಚಾರಿ ಆಸ್ಪತ್ರೆಗಳು, ಆನೆಗಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರಗಳ ನವೀಕರಣ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಇದರಿಂದಾಗಿ, ಮಾನವ ಆರೈಕೆಯಲ್ಲಿರುವ 62 ಸುಮಾತ್ರನ್ ಆನೆಗಳಿಗೆ ಹಾಗೂ ಸುತ್ತಮುತ್ತಲಿನ ಶೇ 100 ಕ್ಕೂ ಹೆಚ್ಚು ಕಾಡು ಆನೆಗಳಿಗೆ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

'ಇಂಡೊನೇಷ್ಯಾ ದ ಅಪಾರ ಜೈವಿಕ ವೈವಿಧ್ಯತೆಯನ್ನು ರಕ್ಷಿಸುವಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ' ಎಂದು ವಂತಾರಾ ಸಿಇಒ ವಿವಾನ್ ಕರಾನಿ ಹೇಳಿದ್ದಾರೆ.

ಗುಜರಾತ್‌ನ ಜಾಮ್‌ನಗರದಲ್ಲಿ ನಿರ್ಮಾಣವಾಗಿರುವ ಈ ವಂತಾರಾದಲ್ಲಿ ಗಾಯಗೊಂಡ ಮತ್ತು ಅಪಾಯದಲ್ಲಿರುವ ಪ್ರಾಣಿಗಳ ರಕ್ಷಣೆ, ಪುನರ್ವಸತಿ, ಚಿಕಿತ್ಸೆ ಮತ್ತು ತಳಿ ಸಂವರ್ಧನೆ ಕಾರ್ಯಗಳು ನಡೆಯುತ್ತವೆ. ಇದೇ ರೀತಿ ಇಂಡೊನೇಷ್ಯಾ ದಲ್ಲಿರುವ ಫೌನಾ ಲ್ಯಾಂಡ್ ಸಂಸ್ಥೆ ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುತ್ತದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries