HEALTH TIPS

ನೀಟ್ ಆಕಾಂಕ್ಷಿ ಆತ್ಮಹತ್ಯೆ; ಮೊದಲ ಯತ್ನದಲ್ಲಿ ಕಡಿಮೆ ಅಂಕ ಪಡೆದಿದ್ದರಿಂದ ಖಿನ್ನತೆ

ಕೋಟಾ: 'ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮಧ್ಯಪ್ರದೇಶದ ವಿದ್ಯಾರ್ಥಿನಿ ಖುಷ್ಬೂ ಪಟೇಲ್(20) ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.‌ 'ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಎರಡನೇ ಬಾರಿ ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ, ಮೊದಲ ಯತ್ನದಲ್ಲಿ 450 ಅಂಕ ಪಡೆದಿದ್ದರಿಂದ ಖಿನ್ನತೆಗೆ ಒಳಗಾಗಿದ್ದಳು' ಎಂದು ಪೊಲೀಸ್ ಅಧಿಕಾರಿ ದೇವೇಶ್ ಭಾರದ್ವಾಜ್‌ ತಿಳಿಸಿದ್ದಾರೆ.

ಮೃತರ ತಂಗಿಯು ಮಂಗಳವಾರ ರಾತ್ರಿ ತರಗತಿ ಮುಗಿಸಿ ಬಂದಾಗ ಕೊಠಡಿಯ ಬಾಗಿಲು ಒಳಗಿನಿಂದ ಮುಚ್ಚಿತ್ತು. ಹಲವು ಬಾರಿ ಬಾಗಿಲು ಬಡಿದರೂ ತೆಗೆದಿರಲಿಲ್ಲ. ಇದಾದ ಬಳಿಕ ಸ್ನೇಹಿತರಿಗೆ, ನೆರೆಯವರಿಗೆ ಮಾಹಿತಿ ನೀಡಿದ್ದರು. ಬಾಗಿಲು ಒಡೆದು ಪರಿಶೀಲಿಸಿದ ವೇಳೆ ವಿದ್ಯಾರ್ಥಿನಿಯ ಮೃತದೇಹವು ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಿತು.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೀಟ್ ಆಕಾಂಕ್ಷಿಗಳಿಗೆ ದೇಶದ ತರಬೇತಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೋಟಾದಲ್ಲಿ, ಈ ವರ್ಷ ಒಟ್ಟು 8 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries