HEALTH TIPS

ಬಿಜೆಪಿ ತೊರೆದ ಶೆಹಝಾದ್ ಪೂನವಾಲ: ವರದಿ

ವದೆಹಲಿ:  ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನವಾಲ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಅವರ ಎಕ್ಸ್‌ ಬಯೋವನ್ನು ಉಲ್ಲೇಖಿಸಿ hindustantimes.com ವರದಿ ಮಾಡಿದೆ. 


ಬಿಜೆಪಿಗೆ ರಾಜೀನಾಮೆ ನೀಡಿರುವ ಬಗ್ಗೆ ಶೆಹಝಾದ್ ಪೂನವಾಲ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಎಕ್ಸ್‌ನಲ್ಲಿ ಅವರ ನವೀಕರಿಸಿದ ಬಯೋದಲ್ಲಿ ಬಿಜೆಪಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಪರ್ಯಂತ ಅನುಯಾಯಿ ಎಂದು ಉಲ್ಲೇಖಿಸಿದ್ದಾರೆ.

ಪೂನವಾಲ ಅವರು ಗುರುವಾರ ತಮ್ಮ ಬಯೋವನ್ನು ನವೀಕರಿಸಿದ್ದಾರೆ ಆದರೆ ಈ ನಿರ್ಧಾರಕ್ಕೆ ಹಿಂದೆ ಯಾವುದೇ ಕಾರಣವನ್ನು ನೀಡಿಲ್ಲ.

ಅವರು ತಮ್ಮ ರಾಜೀನಾಮೆಯನ್ನು ಬಿಜೆಪಿಯ ವರಿಷ್ಠರಿಗೆ ಸಲ್ಲಿಸಿದ್ದಾರೆ ಮತ್ತು ನಿರ್ಧಾರದ ಹಿಂದೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ CNN-News18 ವರದಿ ಮಾಡಿದೆ.

2017ರಲ್ಲಿ ಕಾಂಗ್ರೆಸ್ ತೊರೆದ ನಂತರ ಪೂನಾವಾಲಾ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. ಬಿಜೆಪಿಗೆ ಸೇರಿದ ನಂತರ ಪೂನಾವಾಲಾ ಅವರನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿತ್ತು.

ಪೂನಾವಾಲಾ ಅವರು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಟ್ಟಾ ಬೆಂಬಲಿಗರಾಗಿದ್ದಾರೆ. ಅವರು ಪದೇ ಪದೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಪೂನಾವಾಲಾ ಅವರು ಇತ್ತೀಚಿನ ಕೆಲವು ಪೋಸ್ಟ್‌ಗಳಲ್ಲಿ ಸಕ್ರಿಯ ರಾಜಕೀಯದಿಂದ ದೂರ ಸರಿಯುವ ಸೂಚನೆಗಳನ್ನು ನೀಡಿದ್ದರು. ಅವರು ತಮ್ಮ ಹಳೆಯ ಸಂದರ್ಶನಗಳ ಕೆಲವು ವಿಡಿಯೊ ಕ್ಲಿಪ್‌ಗಳನ್ನು ಯಾವುದೇ ಶೀರ್ಷಿಕೆ ಇಲ್ಲದೆ ಹಂಚಿಕೊಂಡಿದ್ದರು. ಆ ಸಂದರ್ಶನಗಳಲ್ಲಿ ಅವರು ರಾಜಕೀಯ ತೊರೆಯುವ ಕುರಿತು ಮಾತನಾಡಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries