ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ವತಿಯಿಂದ ಎಂಟು ದಿವಸಗಳ ಕಾಲ ನಡೆಯಲಿರುವ ಯಕ್ಷಗಾನ ಪ್ರದರ್ಶನ ಭಾನುವಾರ ಆರಂಭಗೊಂಡಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲಿಸುವಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಲಾ. 9ರ ವರೆಗೆ ಪ್ರತಿದಿನ ಸಂಜೆ 5ಕ್ಕೆ ಯಕ್ಷಗಾನ ಕಾರ್ಯಕ್ರಮ ನಡೆಯಲಿರುವುದು.
ವಿವಿಧ ದಿವಸಗಳಲ್ಲಿ ಮಾಯಾವಿಹಾರಿ, ತಪೆÇೀನಂದನ, ಕನ್ಯಾಂತರಂಗ ಜಾಂಬವತಿ ಕಲ್ಯಾಣ, ಪಾದ ಪ್ರತೀಕ್ಷಾ, ಮಧುಚಕ್ರ, ಸುರತರಂಗಿಣಿ, ಶಶಿವಂಶ ವಲ್ಲರಿ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.



