HEALTH TIPS

ಸಾವರ್ಕರ್ ವಿಷಯಕ್ಕೆ ಸಂಬಂಧಿಸಿ ಶಿಕ್ಷಕನ ಅಮಾನತು-ರಾಜ್ಯಸಭೆಯಲ್ಲಿ ಮಂಡನೆಗೆ ಸಿದ್ಧತೆ?

ಕಾಸರಗೋಡು: ಸಾವರ್ಕರ್ ವಿಷಯದಲ್ಲಿ ರಸ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಶಿಕ್ಷಕನ ಅಮಾನತು ಪ್ರಕರಣವನ್ನು ರಾಜ್ಯಸಭೆಯಲ್ಲಿ ಮಂಡಿಸಲು ರಾಜ್ಯ ಸಭಾ ಸದಸ್ಯ ಸದಾನಂದನ್ ಮಾಸ್ಟರ್ ಮುಂದಾಗಿದ್ದಾರೆ.


ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರಲ್ಲಿ ನಡೆದ ರಸಪ್ರಶ್ನೆ ವಿವಾದಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯ ಪಳ್ಳತತಡ್ಕದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಗುರುಪ್ರಸಾದ್ ಅವರ ಅಮಾನತು ಪ್ರಕರಣ ರಾಜ್ಯಸಭೆಯಲ್ಲಿ ಮೊಳಗುವ ಸಾಧ್ಯತೆಯಿದೆ. 

ಈ ವಿಷಯವನ್ನು ರಾಜ್ಯ ಸಭೆಯಲ್ಲಿ ಮಂಡಿಸುವ ಮೂಲಕ ಕೇರಳ ಸರ್ಕರದ ಅಲ್ಪಸಂಖ್ಯಾತ ಓಲೈಕೆ ರಾಜಕರಣದ ವಿರುದ್ಧ ಅವರು ರಾಜ್ಯ ಸಭೆಯಲ್ಲಿ ಮಾತನಾಡುವ ಸಧ್ಯತೆಯಿದೆ. 

ಸಾವರ್ಕರ್ ವಿಷಯದಲ್ಲಿ ಪ್ರಶ್ನೆ ಸಿದ್ಧಪಡಿಸಿದ ತಂಡದ ಓರ್ವ ಹಾಗೂ ಪಳ್ಳತ್ತಡ ಎ.ಯು.ಪಿ.ಶಾಲೆಯ ಹಿರಿಯ ಶಿಕ್ಷಕ ಗುರುಪ್ರಸಾದ್ ಅವರನ್ನು ರಾಜ್ಯ ಶಿಕ್ಷಣ ಇಲಾಖೆ ಸೇವೆಯಿಂದ ಅಮಾನತುಗೊಳಿಸಿದ್ದು,  ಪ್ರಕರಣದ ವಿರುದ್ಧ ಬಿಜೆಪಿ ಸಹಿತ ಸಂಘ ಪರಿವಾರ ಸಂಘಟನೆಗಳು ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸುತ್ತಿದೆ.


ರಾಜ್ಯಸಭಾ ಸದಸ್ಯ ಸದಾನಂದನ್ ಮಾಸ್ಟರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries