ಕಾಸರಗೋಡು: ಆಷಾಡ ಮಾಸದಲ್ಲಿ ಪ್ರತಿವರ್ಷದಂತೆ ವಿಶ್ವ ಹಿಂದೂ ಪರಿಷತ್ ಕಾಸರಗೋಡು ಪ್ರಖಂಡ ನೇತೃತ್ವದಲ್ಲಿ ರಾಮಾಯಣ ಸತ್ಸಂಗ ಕಾರ್ಯಕ್ರಮ ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಆರಂಭಗೊಮಡಿತು.
ಹಿರಿಯ ವೈದ್ಯ ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ವಿಎಚ್ ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಗುಣಪಾಲ ಅಮೈ, ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್, ವಿಶ್ವ ಹಿಂದೂ ಪರಿಷತ್ ಕಣ್ಣೂರು ವಿಭಾಗದ ಪ್ರಮುಖ್ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಉಪಸ್ಥಿತರಿದ್ದರು.
ವಿಎಚ್‍ಪಿ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ವಂದಿಸಿದರು. ಲಕ್ಷ್ಮೀಕಾಂತ ನೆಲ್ಲಿಕುಂಜೆ ಕಾರ್ಯಕ್ರಮ ನಿರೂಪಿಸಿದರು. ಕೆ.ಎನ್.ರಾಮಕೃಷ್ಣ ಹೊಳ್ಳ ಕಿಶೋರ್ ಎಸ್.ವಿ.ಟಿ. ವಸಂತ್ ಕೆರೆಮನೆ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಈ ಸಂದರ್ಭ ವಿದುಷಿ ವೈಭವಿ ಕುಂಬ್ಳೆ ಅವರಿಂದ ಸೀತಾರಾಮ ಕಲ್ಯಾಣ ಹರಿಕಥಾ ಸತ್ಸಂಗ ನಡೆಯಿತು.
'ರಾಮಾಯಣ ಕಥಾ ಸತ್ಸಂಗ' ಕಾರ್ಯಕ್ರಮ ಆ. 12ರ ವರೆಗೆ ನಡೆಯಲಿದೆ. 12ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಡಾ. ಕೆ.ಎನ್ ಬಲ್ಲಾಳ್ ದೀಪ ಪ್ರಜ್ವಲಿಸುವರು. ಲಕ್ಷ್ಮಣೋಜಿ ರಾವ್ ಬಹುಮಾನ್ ಉಪಸ್ಥಿತರಿರುವರು. ಈ ಸಂದರ್ಭ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತೋತ್ಸವ ವಿಶೇಷ ತಾಳಮದ್ದಳೆ'ಪಾದುಕಾ ಪ್ರದಾನ' ಜರಗಲಿರುವುದು.



