HEALTH TIPS

ಯುರೋಪ್‍ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿಗೆ ಇರಾನ್ ಚಿಂತನೆ: ವರದಿ

ಟೆಹರಾನ್: ಯುದ್ಧ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡರೆ ಯುರೋಪ್‍ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಕುರಿತು ಇರಾನ್ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ `ಫೈನಾನ್ಶಿಯಲ್ ಟೈಮ್ಸ್' ಬುಧವಾರ ವರದಿ ಮಾಡಿದೆ.


ಬಲ್ಗೇರಿಯಾ ಮತ್ತು ಸೈಪ್ರಸ್ ಸೇರಿದಂತೆ ಆಗ್ನೇಯ ಯುರೋಪ್‍ನಲ್ಲಿರುವ ಅಮೆರಿಕದ ಮಿಲಿಟರಿ ಆಸ್ತಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳ ಕುರಿತು ಇರಾನ್ ಪಡೆಗಳು ಪರಿಶೀಲನೆ ನಡೆಸಿವೆ.

ಇತ್ತೀಚೆಗಷ್ಟೇ ಅಮೆರಿಕದ ಇಂಧನ ಮರುಪೂರಣ ವಿಮಾನಗಳ ಬಳಕೆಗೆ ತನ್ನ `ಬೆಜ್ಮರ್' ವಾಯುನೆಲೆಯಲ್ಲಿ ಅವಕಾಶ ನೀಡಲು ಅನುಮೋದಿಸಿದ ಬಲ್ಗೇರಿಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಳ್ಳಲು ಇರಾನ್ ಯೋಚಿಸಿದೆ ಎಂದು ವರದಿಯಾಗಿದೆ.

ಸೈಪ್ರಸ್ ಅನ್ನು ಸಹ ಸಂಭಾವ್ಯ ಗುರಿಯಾಗಿ ಪರಿಗಣಿಸಲಾಗಿದೆ. ಈ ದ್ವೀಪವು ಬ್ರಿಟಿಷ್ ಮಿಲಿಟರಿ ನೆಲೆಯನ್ನು ಹೊಂದಿದ್ದು, ಮಾರ್ಚ್ ತಿಂಗಳಲ್ಲಿ ಇದರ ಮೇಲೆ ಡ್ರೋನ್ ದಾಳಿ ನಡೆದಿತ್ತು. ಸಂಘರ್ಷವು ಮತ್ತಷ್ಟು ವ್ಯಾಪಿಸಿದರೆ ಹಾರ್ಮುಝ್ ಜಲಸಂಧಿಯಲ್ಲಿರುವ ಜಲದಾಳದ ಫೈಬರ್-ಆಪ್ಟಿಕ್ ಕೇಬಲ್‍ಗಳ ಮೇಲೆಯೂ ದಾಳಿ ಮಾಡುವ ಸಾಧ್ಯತೆಯನ್ನು ಇರಾನ್ ಪಡೆಗಳು ಪರಿಶೀಲಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಹೊಸ ಪೂರ್ಣ ಪ್ರಮಾಣದ ಸಂಘರ್ಷ ಎದುರಾದರೆ, ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ಆಸ್ತಿಗಳು, ಇಂಧನ ಸೌಲಭ್ಯಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ತನ್ನ ಹಿಂದಿನ ತಂತ್ರವನ್ನು ಮೀರಿ, ದೂರದ ಪ್ರದೇಶಗಳಲ್ಲಿರುವ ಗುರಿಗಳ ಮೇಲೆಯೂ ಇರಾನ್ ದಾಳಿ ಮಾಡಲಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್‍ಜಿಸಿ) ಮತ್ತು ಇತರ ಮಿಲಿಟರಿ ಕಮಾಂಡರ್‌ಗಳು ಎಚ್ಚರಿಸಿದ್ದಾರೆ ಎಂದು ವರದಿ ಹೇಳಿದೆ.

ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಾಗೂ ಸಂಘರ್ಷವನ್ನು ಅಂತ್ಯಗೊಳಿಸುವ ಮಾತುಕತೆಗಳು ಸ್ಥಗಿತಗೊಂಡಿರುವ ಬೆನ್ನಲ್ಲೇ ಈ ವರದಿಗಳು ಹೊರಬಿದ್ದಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries