ನವದೆಹಲಿ: 'ರಾಜ್ಯಸಭಾ ಕಲಾಪದ ವೇಳೆ ಬಿಜೆಪಿ ಸಂಸದೆ ಸುಷ್ಮಿತಾ ದೇವ್ ಅವರು ನನ್ನನ್ನು ಪದೇ ಪದೇ 'ಲುಂಗಿವಾಲಾ' ಎಂದು ಕೂಗಿದ್ಧಾರೆ. ದಕ್ಷಿಣ ಭಾರತದ ಸಂಸ್ಕೃತಿಯ ವಿರುದ್ಧ ಮಾನಹಾನಿಕರ ರೀತಿಯಲ್ಲಿ ಅವರ ಹೇಳಿಕೆ ಇತ್ತು' ಎಂದು ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಅವರು ಸುಷ್ಮಿತಾ ಅವರ ವಿರುದ್ಧ ಹಕ್ಕುಚ್ಯುತಿ ಉಲ್ಲಂಘನೆ ನೋಟಿಸ್ ನೀಡಿದ್ದಾರೆ.
'ಆದಾಯ ತೆರಿಗೆ (ತಿದ್ದುಪಡಿ) ಸುಗ್ರೀವಾಜ್ಞೆ, 2026 ಮತ್ತು ತೆರಿಗೆ ಮತ್ತು ಇತರೆ ಕಾನೂನುಗಳು (ತಿದ್ದುಪಡಿ) ಮಸೂದೆ ಕುರಿತು ಸೋಮವಾರ ನಾನು ಮಾತನಾಡುತ್ತಿದೆ. ಈ ವೇಳೆ ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಿಜೆಪಿ ಸಂಸದರೊಬ್ಬರನ್ನು ಮಾತನಾಡಿಸುವಾಗ, ನನ್ನನ್ನು 'ಲುಂಗಿವಾಲಾ' ಎಂದು ಕೂಗಿದ್ದಾರೆ' ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.
'ಮುಂಬೈನಲ್ಲಿ ದಕ್ಷಿಣ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ 1960 ಮತ್ತು 1970ರಲ್ಲಿ ಸಂದರ್ಭದಲ್ಲಿ, ದಕ್ಷಿಣ ಭಾರತೀಯರ ವಿರುದ್ಧ 'ಲುಂಗಿವಾಲಾ'ಗಳು ಎಂದೇ ಕರೆದು, ಜರಿಯಲಾಗುತ್ತಿತ್ತು' ಎಂದಿದ್ದಾರೆ.

