HEALTH TIPS

ಕರೆ ಗುಣಮಟ್ಟ ಅಳೆಯಲು ಕ್ರಮ

 ನವದೆಹಲಿ (PTI): ಮೊಬೈಲ್‌ ದೂರವಾಣಿ ಕರೆಯು ಮಧ್ಯದಲ್ಲಿಯೇ ಕಡಿತವಾಗುವುದು, ಧ್ವನಿ ಗುಣಮಟ್ಟ ಚೆನ್ನಾಗಿಲ್ಲದೆ ಇರುವುದು ಕಿರಿಕಿರಿ ಉಂಟು ಮಾಡುತ್ತಿದ್ದರೆ, ಮೊಬೈಲ್‌ ಬಳಕೆದಾರರು ಅಂತಹ ಸಮಸ್ಯೆಗಳನ್ನು ವರದಿ ಮಾಡಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸೋಮವಾರ ಬಿಡುಗಡೆ ಮಾಡಿರುವ 'ಮೈಕಾಲ್‌' ಆಯಪ್‌ ನೆಚ್ಚಿಕೊಳ್ಳಬಹುದು.


ಹಿಂದೆ ಇದ್ದ ಆಯಪ್‌ನ ಸುಧಾರಿತ ರೂಪ ಇದಾಗಿದ್ದು, ಧ್ವನಿ ಆಧಾರಿತ ಕರೆಯ ಗುಣಮಟ್ಟವನ್ನು ತಿಳಿಸಲು ಇದು ಬಳಕೆದಾರರಿಗೆ ನೆರವಾಗಲಿದೆ. ಅಲ್ಲದೆ ಕರೆ ಕಡಿತವಾಗುವ, ಧ್ವನಿಯು ಮೊಳಗುವ, ಮಾತನಾಡಿದ್ದು ತಡವಾಗಿ ಕೇಳಿಸುವಂತಹ ಸಮಸ್ಯೆಗಳು ಇದ್ದರೆ ಅದರ ಬಗ್ಗೆ ವರದಿ ಮಾಡಲು ಈ ಆಯಪ್ ಬಳಸಬಹುದು.

ಈ ಆಯಪ್‌ ಈಗ ಆಯಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಿದೆ. ಆಯಪಲ್‌ ಐಫೋನ್‌ ಬಳಕೆದಾರರಿಗೆ ಇದು ಸದ್ಯಕ್ಕೆ ಸಿಗುತ್ತಿಲ್ಲ. ಈ ಆಯಪ್‌ ಬಳಕೆ ಸಂಪೂರ್ಣವಾಗಿ ಐಚ್ಛಿಕ ಎಂದು ಟ್ರಾಯ್ ಹೇಳಿದೆ.

ನೆಟ್‌ವರ್ಕ್‌ ಎಷ್ಟು ಉತ್ತಮವಾಗಿದೆ ಎಂಬುದನ್ನು ಕೂಡ ಈ ಆಯಪ್‌ ಬಳಸಿ ಪರೀಕ್ಷಿಸಬಹುದು. ಈ ಆಯಪ್‌ ಮೂಲಕ ಲಭ್ಯವಾಗುವ ದತ್ತಾಂಶವನ್ನು ಟ್ರಾಯ್‌, ದೂರಸಂಪರ್ಕ ಸೇವಾ ಕಂಪನಿಗಳ ಜೊತೆ ಹಂಚಿಕೊಳ್ಳುತ್ತದೆ. ಕಂಪನಿಗಳು ತಮ್ಮ ಜಾಲ ಉತ್ತಮಪಡಿಸಲು ಇದನ್ನು ಬಳಸಿಕೊಳ್ಳಬಹುದು.

ಮೊಬೈಲ್‌ ದೂರವಾಣಿ ಕರೆಗಳಲ್ಲಿ ಇರುವ ಸಮಸ್ಯೆಗಳನ್ನು ಸೇವಾದಾತರಿಗೆ ತಿಳಿಸಲು ಈ ಆಯಪ್‌ ಗ್ರಾಹಕರ ಕೈಯಲ್ಲಿ ಬಹಳ ಮುಖ್ಯವಾದ ಸಲಕರಣೆಯಂತೆ ಆಗಲಿದೆ ಎಂದು ಟ್ರಾಯ್‌ ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಹೇಳಿದ್ದಾರೆ.

ಯಾವೆಲ್ಲ ವಿಷಯಗಳ ಬಗ್ಗೆ ವರದಿ ಮಾಡಬಹುದು?

ಈ ಆಯಪ್‌ ಬಳಸಿ ಗ್ರಾಹಕರು ಕರೆ ಕಡಿತವಾಗುವ ಬಗ್ಗೆ, ಕರೆಯ ಸಂದರ್ಭದಲ್ಲಿ ಧ್ವನಿಯು ಮತ್ತೆಮತ್ತೆ ಕೇಳಿಸುವುದರ ಬಗ್ಗೆ, ಧ್ವನಿಯು ತಡವಾಗಿ ಕೇಳಿಸುತ್ತಿದ್ದರೆ, ಒಬ್ಬರಿಗೆ ಮಾಡಿದ ಕರೆ ಇನ್ನೊಬ್ಬರಿಗೆ ರವಾನೆ ಆದರೆ, ಧ್ವನಿ ಸ್ಪಷ್ಟವಾಗಿರದಿದ್ದರೆ, ಇನ್ನೊಬ್ಬರ ಧ್ವನಿ ಕೇಳುತ್ತ ಇಲ್ಲದಿದ್ದರೆ, ಸಂಪರ್ಕ ಸಾಧ್ಯವಾಗುವುದು ತೀರಾ ವಿಳಂಬ ಆದರೆ ಅದರ ಬಗ್ಗೆ ದೂರು ನೀಡಬಹುದು. ಗ್ರಾಹಕರು ನೀಡುವ ಪ್ರತಿಕ್ರಿಯೆಗಳನ್ನು ಸೇವಾದಾತ ಕಂಪನಿಗಳಿಗೆ ಒದಗಿಸಲಾಗುತ್ತದೆ. ಆದರೆ ಗ್ರಾಹಕರ ವಿವರವನ್ನು ಅವರಿಗೆ ನೀಡುವುದಿಲ್ಲ. 



ಮೊಬೈಲ್‌ ಆಧಾರಿತ ಇಂಟರ್ನೆಟ್‌ ಸಂಪರ್ಕಗಳಲ್ಲಿ ಭಾರಿ ಪ್ರಮಾಣದ ಬೆಳವಣಿಗೆ ಆಗಿದ್ದರೂ, ಧ್ವನಿ ಆಧಾರಿತ ಕರೆಗಳು ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಸೇವೆಯಾಗಿ ಉಳಿದಿವೆ 

ಅನಿಲ್ ಕುಮಾರ್ ಲಹೋಟಿ, ಟ್ರಾಯ್ ಅಧ್ಯಕ್ಷ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries