ಮುಳ್ಳೇರಿಯ: ಇಲ್ಲಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಆಶ್ರಯದಲ್ಲಿ ಓಣಂ ದಿನದಂಗವಾಗಿ 'ಪೂಕಳ ಸ್ಪರ್ಧೆ ಸ್ವಾಭವದಲ್ಲಿ' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಚಂದ್ರನ್ ಮೊಟ್ಟಮ್ಮಾಳ್ ಉದ್ಘಾಟಿಸಿದರು. ಕೆ.ಕೆ.ರಂಜಿತ್, ಕೆ.ಕೆ.ಮೋಹನನ್, ಎ.ಕೆ.ಬಾಲನ್ ಮಾಸ್ತರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಚಂದ್ರನ್ ಮೊಟ್ಟಮ್ಮಾಳ್, ಸಚೀಂದ್ರನ್ ಕಾರಡ್ಕ ಮತ್ತು ವಿನು ನಾರಾಯಣನ್ ಬೋವಿಕ್ಕಾನ ಪುಷ್ಪಾರ್ಚನೆ ಮಾಡಿದರು.
ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದಯ ಪುರುಷ ಸ್ವಸಹಾಯ ಸಂಗಮದ ಆಶ್ರಯದಲ್ಲಿ ಓಣಂ ಕಿಟ್‍ಗಳನ್ನು ವಿತರಿಸಲಾಯಿತು. ಕೆ.ಕೆ.ಮೋಹನನ್ ಉದ್ಘಾಟಿಸಿದರು. ಸಿ.ಎಚ್.ಶಶಿಧರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಾಮೋದರನ್.ಕೆ, ಜಯಪ್ರಕಾಶ್ ಟಿ, ಕೆ.ಕೆ, ರಂಜಿತ್, ಕೆ.ಗೋವಿಂದನ್, ರಾಜೇಶ್ ಕುಮಾರ್ ಕೆ ಮತ್ತು ಸುಂದರ ಮವ್ವಾರ್ ಮಾತನಾಡಿದರು.



