ಕಾಸರಗೋಡು: ವಿಕಲಚೇತನರಿಗೆ ಯುಡಿಐಡಿ ಕಾರ್ಡ್‍ಗಳನ್ನು ವಿತರಿಸುವ ಕುರಿತು ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರುಗಿತು. ಸಹಾಯಕ ಜಿಲ್ಲಾಧಿಕಾರಿ (ಆರ್‍ಆರ್) ಶ್ರೀಜಿತ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಎಲ್ಲಾ ವಿಕಲಚೇತನರಿಗೆ ಮೂರು ತಿಂಗಳ ಕಲಾವಧಿಯಲ್ಲಿ ಯುಡಿಐಡಿ ಕಾರ್ಡ್‍ಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. 2015ರ ಜನಗಣತಿಯ ಪ್ರಕಾರ, ಕಾಸರಗೋಡು ಜಿಲ್ಲೆಯಲ್ಲಿ 35,000 ಮಂದಿ ವಿಕಲಚೇತನ ವ್ಯಕ್ತಿಗಳಿದ್ದರೂ, ಕೇವಲ 30,000 ಮಂದಿ ಮಾತ್ರ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಉಳಿದ 5,000 ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಕಾರ್ಡ್ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಜಿತ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಕೆ.ಟಿ. ರೇಖಾ, ಜಿಲ್ಲಾ ಸಾಮಾಜಿಕ ನ್ಯಾಯಾಧಿಕಾರಿ ಆರ್ಯ ಪಿ. ರಾಜ್, ಜಿಲ್ಲಾ ಯೋಜನಾಧಿಕಾರಿ ಡಾ. ಅನಿಲ್ ಕುಮಾರ್ ಬಿ.ಎಂ., ಅಕ್ಷಯ ಸಂಯೋಜಕ ಸಂತೋಷ್ ಕುಮಾರ್ ಹಾಗೂ ಸ್ಥಳೀಯಾಡಳಿತ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.



