HEALTH TIPS

ಏಳರ ಹರೆಯದ ಬಾಲಕನ ಅಪಹರಣಕ್ಕೆ ಯತ್ನ- ದೂರು

ಕುಂಬಳೆ: ಕುಂಬಳೆ ಪೋಲೀಸ್ ಠಾಣಾ ವ್ಯಾಪ್ತಿಯ ಭಾಸ್ಕರ ನಗರದಲ್ಲಿ ಏಳರ ಹರೆಯದ ಬಾಲಕನನ್ನು ಕಾರಿನಲ್ಲಿ ಅಪಹರಿಸಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ತಂದೆ ನೀಡಿದ ದೂರಿನಂತೆ ಕುಂಬಳೆ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು,  ಘಟನೆ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಲಾರಂಭಿಸಿದ್ದಾರೆ.

ಭಾಸ್ಕರನಗರದ ಕ್ವಾರ್ಟರ್ಸ್ ಲೈನ್ ಒಂದರಲ್ಲಿ ವಾಸಿಸುತ್ತಿರುವ ಉತ್ತರಭಾರತದ ಕುಟುಂಬವೊಂದರ ಬಾಲಕನನ್ನು ಅಪಹರಿಸಲುಯತ್ನಿಸಲಾಗಿದೆ.   ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಪೊಲೀಸರ ಪ್ರಕಾರ,  ಕುಟುಂಬದ ಮಗುವೊಂದಕ್ಕೆ ಅಂಗನವಾಡಿಯಿಂದ ಉಚಿತವಾಗಿ ಲಭಿಸುವ ಆಹಾರ ಪಡೆದುಕೊಳ್ಳಲು ಏಳರ ಹರೆಯದ ಬಾಲಕನನ್ನು ಅಂಗನವಾಡಿಗೆ ಕಳುಹಿಸಲಾಗಿದೆ. ಬಾಲಕ ಅಂಗನವಾಡಿಯಿಂದ ಆಹಾರ ಪಡೆದು ಕ್ವಾರ್ಟರ್ಸ್‍ಗೆ ಮರಳುತ್ತಿದ್ದಾಗ ಕಾರಿನಲ್ಲಿ ಮಾಸ್ಕ್ ಧರಿಸಿದ್ದ ಇಬ್ಬರು ತಲುಪಿದ್ದು, ಬಾಲಕನ ಸಮೀಪದಲ್ಲಿ ಕಾರು ನಿಲ್ಲಿಸಿ, ನಿನ್ನನ್ನು ಮನೆಗೆ ತಲುಪಿಸುವುದಾಗಿ ತಿಳಿಸಿ ಕಾರಿಗೇರುವಂತೆ ಬಲವಂತಪಡಿಸಿದ್ದಾರೆ. ಇದರಿಂದ ಬಾಲಕ ಹೆದರಿ ಅಲ್ಲಿಂದ ಮನೆಗೆ ಓಡಿ ಪರಾರಿಯಾಗಿ ಮನೆಯವರಿಗೆ ನೀಡಿದ ಮಾಹಿತಿಯನ್ವಯ ದೂರು ಸಲ್ಲಿಕೆಯಾಗಿರುವುದಾಗಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries