ಕಾಸರಗೋಡು: ನಗರದ ರೈಲು ನಿಲ್ದಾಣದಲ್ಲಿ ವಾರಸುದಾರರಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದ 3.084 ಕೆ.ಜಿ ಗಾಂಜಾ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಓಣಂ ವಿಶೇಷ ಡ್ರೈವ್ ಅಂಗವಾಗಿ ಶುಕ್ರವಾರ ಕಾಸರಗೋಡು ರೇಂಜ್ ಅಬಕಾರಿ ಮತ್ತು ಆರ್.ಪಿ.ಎಫ್ ಜಂಟಿಯಾಗಿ ನಡೆಸಿದ ತಪಾಸಣೆಯ ವೇಳೆ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಪೆÇಟ್ಟಣ ಪತ್ತೆಯಾಗಿದೆ. ಪ್ರಕ್ರಣಕ್ಕೆ ಸಂಬಂಧಿಸಿ ಪೆÇಲೀಸ್ ಮತ್ತು ಅಬಕಾರಿ ಇಲಾಖೆ ತನಿಖೆ ಆರಂಭಿಸಿದೆ.
ಅಬಕಾರಿ ಇನ್ಸ್ಪೆಕ್ಟರ್ ಟಿ.ಕೆ. ಅಷ್ಕರ್ ಅವರ ನೇತೃತ್ವದಲ್ಲಿ ಸಹಾಯಕ ಅಬಕಾರಿ ಇನ್ಸ್‍ಪೆಕ್ಟರ್ ಅನೀಶ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

