HEALTH TIPS

ವರ್ಗಾವಣೆಗೊಂಡ ಪಂ.ಕಾರ್ಯದರ್ಶಿ ಹೆಸರಲ್ಲಿ ನಕಲಿ ದಾಖಲೆ-ಓವರ್‍ಸೀಯರ್ ವಿರುದ್ಧ ಕೇಸು

ಕುಂಬಳೆ: ಕುಂಬಳೆ ಗ್ರಾಮ ಪಂಚಾಯಿತಿಯಿಂದ ಕಟ್ಟಡ ನಂಬರ್ ಲಭಿಸಲು, ವರ್ಗಾವಣೆಗೊಂಡ ಪಂಚಾಯಿತಿ ಕಾರ್ಯದರ್ಶಿ ಹೆಸರಲ್ಲಿ ನಕಲಿ ಪ್ರಮಾಣಪತ್ರ ಹಾಗೂ ಹಣ ಪಾವತಿಸಿದ ರಶೀದಿ ತಯಾರಿಸಿದ ಆರೋಪದಂತೆ ಓವರ್‍ಸೀಯರ್ ವಿರುದ್ಧ ಕುಂಬಳೆ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ಕುಂಬಳೆ ಪಂಚಾಯಿತಿ ನಿಕಟಪೂರ್ವ ಕಾರ್ಯದರ್ಶಿ ಕೋಟ್ಟಯಂ ನಿವಾಸಿ ಸಿದ್ದಾರ್ಥನ್ ನೀಡಿದ ದೂರಿನನ್ವಯ ಕೊಡ್ಯಮೆ ಪೂಕಟ್ಟೆ ನಿವಾಸಿ ಫಾರೂಕ್ ಎಂಬಾತನ ವಿರುದ್ಧ ಈ ಕೇಸು.  ಕಳೆದ ಜನವರಿ 14ರಂದು ಘಟನೆ ನಡೆದಿದ್ದು,  ಫಾರೂಕ್ ಮಾಲಿಕತ್ವದ ಉಳ್ವಾರಿನಲ್ಲಿರುವ ಕಟ್ಟಡಕ್ಕೆ ನಂಬರ್ ಲಭಿಸಲು ಬೇಕಾದ ದಾಖಲೆಪತ್ರಗಳನ್ನು ನಕಲಿಯಾಗಿ ತಯಾರಿಸಲಾಗಿದೆ. ಕಳೆದ ಸೆಪ್ಟೆಂಬರ್ 25ರಂದು ಕಾರ್ಯದರ್ಶಿ ಕುಂಬಳೆಯಿಂದ ವರ್ಗಾವಣೆಗೊಂಡಿದ್ದರೂ, ಇವರ ಹೆಸರಲ್ಲಿ ನವೆಂಬರ್ 27ರಂದು ರೆಗ್ಯುಲರೈಸೇಶನ್ ಆರ್ಡರ್, ಅಕ್ಯುಪೆನ್ಸಿ ಸರ್ಟಿಫಿಕೇಟ್, ಹಣ ಪಾವತಿಸಿದ ರಶೀದಿ ನಕಲಿಯಾಗಿ ತಯಾರಿಸಿ ಸಲ್ಲಿಸಿರುವುದಾಗಿ ದೂರಲಾಗಿದೆ. ನಕಲಿ ದಾಖಲೆಗಳನ್ನು ತಯಾರಿಸಲು ಇತರರ ಸಹಾಯ ಪಡೆಯಲಾಗಿದೆಯೇ ಎಂಬ ಬಗ್ಗೆ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries