HEALTH TIPS

ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಪ್ಪು ಯಾದವ್ ಮೇಲೆ ದಾಳಿ: ಪ್ರಕರಣ ದಾಖಲು

ನವದೆಹಲಿಪತ್ರಿಕಾಗೋಷ್ಠಿ ಸಂದರ್ಭ ಪಕ್ಷೇತರ ಸಂಸದ ರಾಜೇಶ್ ರಂಜನ್ ಆಲಿಯಾಸ್ ಪಪ್ಪು ಯಾದವ್ ಅವರತ್ತ ಶೂ ಎಸೆದ ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ.


ಪ್ರಕರಣದ ಆರೋಪಿಗಳನ್ನು ಹ್ಯಾಪಿ ಶರ್ಮಾ ಮತ್ತು ಸಮಿತ್ ಗಿರಿ ಎಂದು ಗುರುತಿಸಲಾಗಿದೆ.

ಈ ಘಟನೆಯ ಕುರಿತು ತನಿಖೆ ತೀವ್ರಗೊಂಡಿರುವಂತೆ, ಇಬ್ಬರೂ ವ್ಯಕ್ತಿಗಳು ಬಿಜೆಪಿಗೆ ನೇರ ಸಂಬಂಧ ಹೊಂದಿದ್ದಾರೆ ಮತ್ತು ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ.

ಇಬ್ಬರೂ ಬಿಜೆಪಿಯ ಬುಲಂದ್‌ಶಹರ್ ಘಟಕದ ಪದಾಧಿಕಾರಿಗಳು. ಶರ್ಮಾ ಅವರು ಗ್ರಾಮೀಣ ಘಟಕದ ನೂತನ ಉಪಾಧ್ಯಕ್ಷರಾಗಿದ್ದರೆ, ಗಿರಿ ಅವರು ನಗರ ಘಟಕದ ಕಾರ್ಯದರ್ಶಿಯಾಗಿದ್ದಾರೆ.

ಶರ್ಮಾ ಅವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದಾರೆ ಮತ್ತು ಗಿರಿ ಅವರು ಕೃಷಿ ಹಾಗೂ ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries