ರಾಂಚಿ : ವಿವಿಧ ವಿದ್ಯಾರ್ಥಿ ಸಂಘಟನೆಗಳೊಂದಿಗೆ ಜಾರ್ಖಂಡ್ ಸರ್ಕಾರ ಶನಿವಾರ ನಡೆಸಿದ ಮಾತುಕತೆಯು ವಿಫಲವಾಗಿದೆ.
'14ನೇ ಜಾರ್ಖಂಡ್ ಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ಜೆಪಿಎಸ್‌ಸಿ ನಡೆಸಿದ ಎಲ್ಲ ಪರೀಕ್ಷೆಗಳು ರದ್ದಾಗಬೇಕು' ಎಂಬ ಪಟ್ಟನ್ನು ವಿದ್ಯಾರ್ಥಿಗಳು ಸಡಿಲಿಸಲಿಲ್ಲ.
ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಈ ಸಂಘಟನೆಗಳು ಶನಿವಾರ ಘೋಷಿಸಿವೆ.
ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣವು ಕಳೆದ 15 ದಿನಗಳಿಂದ ವಿದ್ಯಾರ್ಥಿಗಳಿಂದ ತುಂಬಿದೆ. ಒಂದೆಡೆ, ಜಾರ್ಖಂಡ್ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ (ಜೆಎಲ್‌ಕೆಎಂ) ನಾಯಕ ದೇವೇಂದ್ರ ನಾಥ್ ಮಹಾತೊ ಅವರು ಸತತ 7 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಜೆಪಿಎಸ್‌ಸಿ/ಜೆಎಸ್‌ಎಸ್‌ಸಿ ಸುಧಾರಣೆಗಳ ಮಂಚ್ ಕೂಡ ಇಲ್ಲಿಯೇ ಪ್ರತಿಭಟಿಸುತ್ತಿದೆ. ಶನಿವಾರದಿಂದ ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್‌ಎ) ಕೂಡ ಪ್ರತ್ಯೇಕ ವೇದಿಕೆಯಲ್ಲಿ ಪ್ರತಿಭಟನೆ ಆರಂಭಿಸಿದೆ.
ಸರ್ಕಾರದ ನಿಯೋಗವು ದೇವೇಂದ್ರ ಅವರನ್ನು ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿತು. ಬಳಿಕ, ಕಾಂಗ್ರೆಸ್‌ನ ಎನ್‌ಎಸ್‌ಯುಐ, ಆಡಳಿತಾರೂಢ ಜೆಎಂಎಂ ಪಕ್ಷದ ವಿದ್ಯಾರ್ಥಿ ಘಟಕ ಜಾರ್ಖಂಡ್ ವಿದ್ಯಾರ್ಥಿ ಮೊರ್ಚಾದೊಂದಿಗೂ (ಜೆಸಿಎಂ) ಮಾತುಕತೆ ನಡೆಸಿತು. ಶುಕ್ರವಾರ ರಾತ್ರಿ ಜೆಪಿಎಸ್‌ಸಿ/ಜೆಎಸ್‌ಎಸ್‌ಸಿ ಸುಧಾರಣಾ ಮಂಚ್‌ನ ನಿಯೋಗದೊಂದಿಗೂ ಸರ್ಕಾರವು ಮಾತುಕತೆ ನಡೆಸಿತ್ತು.
14ನೇ ಜೆಪಿಎಸ್‌ಸಿ ನೇಮಕಾತಿ ಪರೀಕ್ಷೆ ರದ್ದತಿ ಸೇರಿದಂತೆ ಒಟ್ಟು ಐದು ಬೇಡಿಕೆಗಳನ್ನು ಜೆಸಿಎಂ, ಸರ್ಕಾರದ ಮುಂದೆ ಇರಿಸಿದೆ. ಎನ್‌ಎಸ್‌ಯುಐ ಒಟ್ಟು ಆರು ಬೇಡಿಕೆಗಳನ್ನು ಇರಿಸಿದೆ. 'ಮುಂದಿನ 90 ದಿನಗಳ ಒಳಗಾಗಿ ಜೆಪಿಎಸ್‌ಸಿ ಮತ್ತು ಜೆಎಸ್‌ಎಸ್‌ಸಿ ಪರೀಕ್ಷೆಗಳಿಗೆ ಸಂಬಂಧಿಸಿ ಸಿಐಡಿ ತನಿಖೆ ನಡೆಸಬೇಕು. ಎನ್‌ಟಿಎ ರೀತಿಯಲ್ಲಿಯೇ ಜಾರ್ಖಂಡ್ ಪರೀಕ್ಷಾ ಏಜೆನ್ಸಿ (ಜೆಟಿಎ) ರಚಿಸಬೇಕು' ಎಂಬುದು ಎನ್‌ಎಸ್‌ಯುಐ ಬೇಡಿಕೆಗಳು.
ಆದಿವಾಸಿ ವಿದ್ಯಾರ್ಥಿಗಳ ಸಂಘವೂ ಬೇಡಿಕೆ ಇರಿಸಿದ್ದು, 'ನೇಮಕಾತಿ ಪರೀಕ್ಷೆಗಳಲ್ಲಿ ಬುಡಕಟ್ಟು ಮತ್ತು ಪ್ರಾದೇಶಿಕ ಭಾಷೆಗಳಲ್ಲಿಯೂ ಅರ್ಹತಾ ಪರೀಕ್ಷೆಗಳನ್ನು ನಡೆಸಬೇಕು' ಎಂದಿದೆ.
ಜಾರ್ಖಂಡ್ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ರಾಂಚಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಶಾಹಿ ಎರಚಿದ್ದಾರೆ. 'ಆಕೆ ಉಮರ್ ಖಾಲಿದ್ ಬೆಂಬಲಿಗಳು. ಆಕೆ ದೇಶವಿರೋಧಿ' ಎಂದು ವ್ಯಕ್ತಿ ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವವ ನೇಹಾ 'ಶಾಹಿ ಎರೆಚಿ ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ನಾನು ಪೆಲೆಟ್ ಗನ್‌ನ ಗುಂಡಿನ ದಾಳಿ ಲಾಠಿ ಪ್ರಹಾರವನ್ನೇ ಎದುರಿಸಿದ್ದೇನೆ' ಎಂದಿದ್ದರು -ಪಿಟಿಐ ಚಿತ್ರದೇವೇಂದ್ರ ನಾಥ್ ಮಹಾತೊ ಜೆಎಲ್‌ಕೆಎಂ ನಾಯಕನಾವು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಸರ್ಕಾರವು ತಕ್ಷಣವೇ ಈಡೇರಿಸಬೇಕು. ನಮ್ಮ ಎಲ್ಲ ಸಂಘಟನೆಗಳ ಬೇಡಿಕೆ ಒಂದೇರಾಂಚಿ ಘಟಕದ ಅಧ್ಯಕ್ಷನಮ್ಮನ್ನು ಪ್ರತ್ಯೇಕ ಎಂದು ಭಾವಿಸಬೇಡಿ. ನಾವು ಸೇರಿಕೊಳ್ಳುತ್ತಿರುವುದು ಪ್ರತಿಭಟನೆಯ ವಿಸ್ತರಣೆಯಷ್ಟೆ. ನಮ್ಮ ಎಲ್ಲರ ಬೇಡಿಕೆಗಳೂ ಒಂದೇ ವಿಜಯ್ ಕುಮಾರ್ ಎಐಎಸ್‌ಎ ಸಂಘಟನೆಯಜಾರ್ಖಂಡ್ ಸರ್ಕಾರದ ನಿಯೋಗವಿದ್ಯಾರ್ಥಿಗಳದ್ದು ನಿಜವಾದ ಬೇಡಿಕೆಗಳು. ಇವುಗಳನ್ನು ನಾವು ಮುಖ್ಯಮಂತ್ರಿ ಅವರ ಮುಂದೆ ಇರಿಸುತ್ತೇವೆ. ಮಾತುಕತೆಗಳು ಸಕಾರಾತ್ಮಕ ರೀತಿಯಲ್ಲಿ ನಡೆದಿವೆ. ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆಪಿಯೂಷ್ ಮಿಶ್ರಾ ಗಾಯಕ-ನಟ (ಪ್ರತಿಭಟನನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆಡಿದ ಮಾತು)ದೆಹಲಿಯ ಪ್ರತಿಭಟನೆಯಲ್ಲಿ ದೇಶದೆಲ್ಲೆಡೆಯ ಯುವಕರು ಭಾಗವಹಿಸಿದ್ದರು. ಜಾರ್ಖಂಡ್ ಕೂಡ ಭಾರತದ ಭಾಗ. ಪ್ರತಿಭಟನೆಯಲ್ಲಿ ಭೇದ ಮಾಡಬಾರದು
ವಿದ್ಯಾರ್ಥಿಗಳ ಎಚ್ಚರಿಕೆ
* 'ಭಾನುವಾರದ ಒಳಗೆ ನಮ್ಮ ಬೇಡಿಕೆಗಳು ಈಡೇರದಿದ್ದರೆ ಆಗಸ್ಟ್ 10ರಂದು ಆಯೋಜಿಸಲು ಯೋಚಿಸಿರುವ ವಿಧಾನಸಭೆವರೆಗಿನ ಪ್ರತಿಭಟನಾ ಮೆರವಣಿಗೆಯನ್ನು ಮಾಡಿಯೇ ತೀರುತ್ತೇವೆ' ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಕೆ ನೀಡಿವೆ. ಆಗಸ್ಟ್ 11ರಂದು ಇದೇ ರೀತಿಯ ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ಹೇಳಿದೆ
* ವಿದ್ಯಾರ್ಥಿಗಳು ಅಭ್ಯರ್ಥಿಗಳು ಸೇರಿದಂತೆ ಯಾರು ಬೇಕಿದ್ದರೂ ಸಲಹೆ ಸೂಚನೆಗಳನ್ನು ನೀಡಲು ಅನುಕೂಲವಾಗುವಂತೆ ಸರ್ಕಾರವು ಇ-ಮೇಲ್ ಐಡಿಯೊಂದನ್ನು ರೂಪಿಸಿದೆ
* ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸದಸ್ಯ ಮುಖೇಶ್ ನೇತೃತ್ವದಲ್ಲಿ ನಿಯೋಗವೊಂದು ಉಪವಾಸ ಸತ್ಯಾಗ್ರಹದಲ್ಲಿ ಕುಳಿತಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದೆ. 'ನಮ್ಮದು ರಾಜಕೀಯ ಪಕ್ಷವಲ್ಲ. ಎಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾದರೂ ನಾವು ಅವರ ಹಕ್ಕುಗಳಿಗಾಗಿ ಅವರೊಂದಿಗೆ ನಿಲ್ಲುತ್ತೇವೆ' ಎಂದು ನಿಯೋಗ ಹೇಳಿದೆ
* ಪ್ರತಿಭಟನನಿರತ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ಹೊರಟ್ಟಿದ್ದ ಎಬಿವಿಪಿ ಸದಸ್ಯರನ್ನು ಪೊಲೀಸರು ತಡೆದರು. ಸಿ.ಎಂ ನಿವಾಸದ ಮುಂದೆ ಹಾಕಿದ್ದ ಬ್ಯಾರಿಕೇಡ್ ಅನ್ನು ಸರಿಸಿ ಮುನ್ನುಗ್ಗಲು ಯತ್ನಿಸಿದ 8-10 ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.
'ಆರೋಗ್ಯ ತೀರಾ ಹದಗೆಟ್ಟಿದೆ'
ದಿನೇ ದಿನೇ ನನ್ನ ಆರೋಗ್ಯ ಹದಗೆಡುತ್ತಿದೆ. ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತಿದೆ. ಹೃದಯದಲ್ಲಿ ಯಾವುದೋ ಸೋಂಕು ಇದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದಾರೆ. ಆರೋಗ್ಯ ಸ್ಥಿತಿ ಹೀಗೆ ಮುಂದುವರಿದರೆ ನನಗೆ ತೊಂದರೆ. ನಾನು ಕೇಳಿಸಿಕೊಳ್ಳಬಲ್ಲೆ ಯೋಚಿಸಬಲ್ಲೆ ಮತ್ತು ನಿಧಾನವಾಗಿ ಮಾತನಾಡಬಲ್ಲೆಯಷ್ಟೆ
ದೇವೇಂದ್ರ ನಾಥ್ ಮಹಾತೊ

