ಕಾಸರಗೋಡು: ರಾಜ್ಯ ಪ್ರವಾಸೋದ್ಯಮ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿರುವ 'ಪೆÇನ್ನೋಣಂ 2026' ಜಿಲ್ಲಾ ಮಟ್ಟದ ಓಣಂ ಆಚರಣೆಯ ಅಂಗವಾಗಿ, ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯನ್ನು ಕೇಂದ್ರವಾಗಿರಿಸಿಕೊಂಡು ಆಗಸ್ಟ್ 24 ರಿಂದ 30 ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ವೈವಿಧ್ಯ ನಡೆಯಲಿವೆ.
ಜಿಲ್ಲಾ ಮಟ್ಟದ ಹೂವಿನ ರಂಗೋಲಿ ಸ್ಪರ್ಧೆಯು 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ. ಕಾಸರಗೋಡು ವ್ಯಾಪಾರಿಗಳ ಸಂಘದ ಸಹಯೋಗದೊಂದಿಗೆ, ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 11 ರವರೆಗೆ ಬೃಹತ್ ಹೂವಿನ ರಂಗೋಲಿಯನ್ನು ರಚಿಸಲಾಗುವುದು. ಸಂಜೆ 4.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಕಲ್ಲಟ್ರ ಮಹಿನ್ ಅಧ್ಯಕ್ಷೆತ ವಹಿಸುವರು. ವಹಿಸಲಿದ್ದಾರೆ. ಜಿಲ್ಲೆಯ ಶಾಸಕರಾದ ಎ.ಕೆ.ಎಂ. ಅಶ್ರಫ್, ಕೆ.ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್, ಸಂದೀಪ್ ವೇರಿಯರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ, ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಿತಿನ್‍ರಾಜ್ ಪಾಲ್ಗೊಳ್ಳುವರು. ಇದಾದ ನಂತರ ಸ್ವಸ್ತಿ ಡ್ಯಾನ್ಸ್ ಅಕಾಡೆಮಿಯಿಂದ ಮೋಹಿನಿಯಾಟ್ಟಂ ಮತ್ತು ಭರತನಾಟ್ಯ ಪ್ರದರ್ಶನಗಳು ಮತ್ತು ಅಥೀನ ನಾಟಕ ನಟರಿವು ವೇದಿಕೆ, ಕಯರಾಲಂ ಪ್ರಸ್ತುತಪಡಿಸುವ 'ಫೆÇೀಕ್ ಮೆಗಾ ಶೋ' ನಡೆಯಲಿದೆ.
25ರಂದು ಸಂಜೆ 5ಕ್ಕೆ ಮಕ್ಕಳ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರ ನಂತರ ಯೂಸುಫ್ ಕಟ್ಟತ್ತಡ್ಕ ಮತ್ತು ಅವರ ತಂಡದಿಂದ 'ಮೊಗ್ರಾಲ್ ಹಾಡುಗಳು' ಹಾಗೂ ನೀರ್ಚಾಲಿನ ಶಿವಾರ್ಪಣ ನಾಟ್ಯಾಲಯದಿಂದ ಭರತನಾಟ್ಯ ಮತ್ತು ಕೂಚಿಪುಡಿ ಪ್ರದರ್ಶನ ನಡೆಯಲಿವೆ. ಸಂಜೆ 7:30ರ ನಂತರ, ಕಲಾಭವನ ರಾಜೇಶ್ ಅವರ ಪ್ರದರ್ಶನ, ಮಟ್ಟನ್ನೂರು ಶಿವದಾಸನ್ ಅವರ ಮಿಮಿಕ್ರಿ ಪ್ರದರ್ಶನ ಮತ್ತು ಕ್ಯಾರಿಯೋಕೆ ಸಂಗೀತ ಕಾರ್ಯಕ್ರಮಗಳು ವೇದಿಕೆಯಲ್ಲಿ ನಡೆಯಲಿವೆ.

