ಉತ್ತರ ಲಖಿಂಪುರ (PTI): ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಪ್ರತಿಭಟನಕಾರರ ಮಧ್ಯೆ ದೇಮಾಜಿ ಜಿಲ್ಲೆಯಲ್ಲಿ ಗುರುವಾರ ಸಂಘರ್ಷ ನಡೆದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನಕಾರರನ್ನು ಚದುರಿಸಲು ಅರುಣಾಚಲ ಪ್ರದೇಶದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಅಸ್ಸಾಂನ ಮಿಸಿಂಗ್ ಸಮುದಾಯದ ವಿದ್ಯಾರ್ಥಿಗಳ ಒಕ್ಕೂಟ 'ದಿ ತಕಮ್ ಮಿಸಿಂಗ್ ಪೋರಿನ್ ಕೆಬಾಂಗ್' (ಟಿಎಂಪಿಕೆ) ಮತ್ತು ಇತರ ಸ್ಥಳೀಯ ಗುಂಪುಗಳು ಅರುಣಾಚಲ ಪ್ರದೇಶದ ವಿರುದ್ಧ ಅನಿರ್ದಿಷ್ಟಾವಧಿ ಆರ್ಥಿಕ ದಿಗ್ಬಂಧನವನ್ನು ಆರಂಭಿಸಿವೆ. ಗುಂಡಿನ ದಾಳಿಯಲ್ಲಿ ಅಸ್ಸಾಂನ ಬುಡಕಟ್ಟು ಸಮುದಾಯದ 12 ಮಂದಿ ಗಾಯಗೊಂಡ ಕಾರಣ ಈ ಪ್ರತಿಭಟನೆ ಆರಂಭಿಸಿವೆ.

