ಮುಳ್ಳೇರಿಯ: ಶ್ರೀಪುಷ್ಪಕ ಬ್ರಾಹ್ಮಣ ಸೇವಾ ಸಂಘ ಕಾಸರಗೋಡು ಶಾಖೆಯ ಅಗಸ್ಟ್ ತಿಂಗಳ ಸಭೆ ಮಲ್ಲ ಕ್ಷೇತ್ರ ಪರಿಸರದಲ್ಲಿರುವ ವಿ.ಪಿ. ಕೇಶವನ್ ಅವರ ವಸತಿಯಲ್ಲಿ ಜರಗಿತು. ರಕ್ಷಾಧಿಕಾರಿ ಬಾಲಕೃಷ್ಣ ಉಳಿಯ ಸಮಕ್ಷಮದಲ್ಲಿ ಟಿ. ಎಂ ಪದ್ಮನಾಭನ್ ನಂಬೀಶ ಅವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ವರದಿ ಮಂಡಿಸಿದರು. 58ನೇ ದೇಶಿಯ ಸಮ್ಮೇಳನದ ಕುರಿತು ವಿ.ಎಂ ಕೃಷ್ಣಪ್ರಸಾದ್ ಸಭೆಯಲ್ಲಿ ವಿವರಿಸಿದರು. ಕೆಪಿ ರಾಜೀವನ್, ಹರಿ ಆರ್. ಬೇಳ, ಎ ವೇಣುಗೋಪಾಲ, ರಾಧಿಕಾ ಪಿ.ವಿ, ಶಂಕರ್ ರಾಜ್, ಗಿರಿಜಾ, ವೀಣಾ, ಶ್ರೀಲತಾ, ಕೆ.ಎಂ. ಸರಸ್ವತಿ, ಶ್ರೀಪ್ರಿಯ, ಪ್ರಕಾಶ ಪಿ.ಎಂ. ಮೊದಲಾದವರು ಸಮ್ಮೇಳನದ ಕುರಿತು ಮಾತನಾಡಿದರು. ವಿ.ವಿ. ರಾಜೇಂದ್ರನ್ ವಂದಿಸಿದರು.

.jpg)
