ಮಂಜೇಶ್ವರ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಕರ್ಮಯೋಗಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆ.12 ರಿಂದ 28 ರವರೆಗೆ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚಾರಣೆ ಜರಗುತ್ತಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ
ಮಂಜೇಶ್ವರ, ಮೀಂಜ, ಮಂಗಲ್ಪಾಡಿ, ವರ್ಕಾಡಿ ಕುಲಾಲ ಪಂಚಾಯತಿ ಶಾಖೆಗಳನ್ನೊಳಗೊಂಡ ಮಾಣಿಲ ಶ್ರೀ ವರಮಹಾಲಕ್ಷ್ಮೀ ವ್ರತಾಚಾರಣೆ ಮಂಜೇಶ್ವರ ವಲಯ ಸಮಿತಿ ನೇತೃತ್ವದಲ್ಲಿ ಮಾಣಿಲ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಭಾನುವಾರ ಬೆಳಿಗ್ಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಚೇರಿಯಿಂದ ಹೊರಟು ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಕ್ಷೇತ್ರದಲ್ಲಿ ಗೌರವ ಪೂಜಿತ ಸ್ವಾಗತದ ಬಳಿಕ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಪದಾಧಿಕಾರಿಗಳಾದ ಸುಧೀರ್ ರಂಜನ್ ದೈಗೋಳಿ, ತಾರಾನಾಥ ಕಣ್ವತೀರ್ಥ, ಉದಯ ಕುಮಾರ್ ಸಿ ಕಣ್ವತೀರ್ಥ, ಸುರೇಶ್ ಕಣ್ವತೀರ್ಥ, ಕೃಷ್ಣಪ್ಪ ಉಜಿರ ಉಪಸ್ಥಿತರಿದ್ದರು. ಭಕ್ತಿಪೂರ್ವಕ ಧನ ಸಹಾಯ ಹಾಗೂ ಹಸಿರುವಾಣಿ ಹೊರೆ ಕಾಣಿಕೆ ಸಾಮಗ್ರಿಗಳನ್ನು ನೀಡಿ ಯಶಸ್ವಿಗೊಳಿಸಿದ ಸರ್ವರಿಗೂ ಸಮಿತಿಯು ವಂದನೆಗಳನ್ನು ಸಲ್ಲಿಸಿತು.

.jpg)
.jpg)
