ಕುಂಬಳೆ: ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಅತಿಕ್ರಮಿಸಿ ನುಗ್ಗಿ ದಾಂಧಲೆ ನಡೆಸಿದ ತಂಡದ ವಿರುದ್ಧ ಕೇಸು ದಾಖಲಿಸಿಕೊಂಡ ಕುಂಬಳೆ ಪೋಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಆರೋಪಿಗಳ ಮಾಹಿತಿ ಲಭಿಸಿದೆಯೆಂದೂ ಅವರನ್ನು ಶೀಘ್ರ ಬಂಧಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ನರ್ಸಿಂಗ್ ಸೀನಿಯರ್ ಆಫೀಸರ್ ರೇಖಾ ಆರ್ ನಾಯರ್ ನೀಡಿದ ದೂರಿನಂತೆ ಕಂಡರೆ ಪತ್ತಹಚ್ಚಬಹುದಾದ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಆ. 2 ರಂದು ಮಧ್ಯಾಹ್ನ 1 ಗಂಟೆ ವೇಳೆ ಘಟನೆ ನಡೆದಿದೆ. ಒ.ಪಿ ಟಿಕೆಟ್ ನಿಲ್ಲಿಸಲಾಯಿತೆಂದು ಆರೋಪಿಸಿ ತಂಡ ಕಚೇರಿಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕರ್ತವ್ಯದಲ್ಲಿದ್ದ ವೈದ್ಯೆಯೊಂದಿಗೂ ವಾಗ್ವಾದಕ್ಕಿಳಿದ ತಂಡ ಅವರನ್ನು ಕೆಲಸ ಮಾಡದಂತೆ ತಡೆದಿರುವುದಾಗಿ ದೂರಲಾಗಿದೆ. ಅನುಮತಿಯಿಲ್ಲದೆ ಆಸ್ಪತ್ರೆಯೊಳಗೆ ನುಗ್ಗಿದ ತಂಡ ಮಹಿಳೆಯರ ಹಾಗೂ ರೋಗಿಗಳ ವೀಡಿಯೋ ತೆಗೆದು ಪ್ರಚಾರಗೈದಿರುವುದಾಗಿಯೂ ದೂರಲಾಗಿದೆ.

.jpg)
