ಬದಿಯಡ್ಕ: ಕಿಳಿಂಗಾರು ಯುವಕೇಸರಿ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಏಕಲವ್ಯ ಬಾಲಗೋಕುಲದ ವತಿಯಿಂದ ಸೆಪ್ಟಂಬರ್ 6 ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣಪತ್ರಿಕೆಯನ್ನು ಕಿಳಿಂಗಾರು ಶಾಲಾ ಪರಿಸರದಲ್ಲಿ ತಾಲೂಕು ಸಾರ್ವಜನಿಕ ವಿತರಣಾಧಿಕಾರಿ(ಸಪ್ಲೈ ಆಫೀಸರ್) ಕೃಷ್ಣ ನಾಯ್ಕ್ ಬಂಡ್ರಡ್ಕ ಬಿಡುಗಡೆಗೊಳಿಸಿದರು. ಕ್ಲಬ್‍ನ ಅಧ್ಯಕ್ಷ ಸುಧಾಕರ ಅನ್ನೆಪಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಸಂಚಾಲಕ ವಸಂತ ಅನ್ನೆಪಲ್ಲಡ್ಕ, ರಾಮ ಬೇರಿಗೆ, ರಂಜಿತ್ ಕಿಳಿಂಗಾರು, ಜಯರಾಜ ಅನ್ನೆಪಲ್ಲಡ್ಕ, ಯಜ್ಞ ಕುಮಾರ್, ಉದಯ, ರಕ್ಷಿತ್, ಏಕಲವ್ಯ, ರಾಜೇಶ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಕಾಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ವಂದಿಸಿದರು. ಸಂಚಾಲಕ ನಾರಾಯಣ ಪಿ. ಪೆರಡಾಲ ನಿರೂಪಿಸಿದರು.

.jpg)
