ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ಕೇರಳದಾದ್ಯಂತ ರೇಷನ್ ವಿತರಣೆ ಸೋಮವಾರದಿಂದ ಆರಂಭವಾಗಲಿದೆ. ಹಳದಿ(ಎಎವೈ) ರೇಷನ್ ಕಾರ್ಡ್ ಹೊಂದಿರುವವರಿಗೆ 30 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ ಉಚಿತವಾಗಿ ದೊರೆಯಲಿದೆ. ಜತೆಗೆ 3 ಪ್ಯಾಕೆಟ್ ಗೋಧಿಹಿಟ್ಟನ್ನು 7 ರೂ.ದರದಲ್ಲಿ ಪಡೆಯಬಹುದು.
ಗುಲಾಬಿ(ಪಿಎಚ್‍ಎಚ್) ಕಾರ್ಡ್‍ನ ಪ್ರತಿ ಸದಸ್ಯರಿಗೆ 4 ಕೆಜಿ ಅಕ್ಕಿ ಮತ್ತು 1 ಕೆಜಿ ಗೋಧಿ ಉಚಿತವಾಗಿ ಸಿಗಲಿದೆ. ಹಿಟ್ಟನ್ನು 9 ರೂ. ದರದಲ್ಲಿ ನೀಡಲಾಗುವುದು, ನೀಲಿ(ಎನ್‍ಪಿಎಸ್)ಕಾರ್ಡು ಹೊಂದಿರುವ ಪ್ರತಿ ಸದಸ್ಯರಿಗೆ 2 ಕೆಜಿ ಅಕ್ಕಿ ಪ್ರತಿ ಕೆಜಿಗೆ 4 ರೂ. ದರದಲ್ಲಿ, 2 ಕೆಜಿ ವಿಶೇಷ ಗೋಧಿ ಪ್ರತಿ ಕೆಜಿಗೆ ರೂ.8.70ರ ದರದಲ್ಲಿ ಹಾಗೂ 3 ಕೆಜಿ ಅಕ್ಕಿ ಪ್ರತಿ ಕೆಜಿಗೆ ರೂ.10.90 ದರದಲ್ಲಿ ದೊರೆಯಲಿದೆ. ತಾಲ್ಲೂಕಿನಲ್ಲಿರುವ ಲಭ್ಯತೆಯನ್ನು ಅವಲಂಬಿಸಿ, ಪ್ರತಿ ಕಾರ್ಡ್‍ಗೆ ಗರಿಷ್ಠ 4 ಕೆಜಿ ಹಿಟ್ಟನ್ನು ಪ್ರತಿ ಕೆಜಿಗೆ ರೂ.17ರ ದರದಲ್ಲಿ ನೀಡಲಾಗುತ್ತದೆ. ಹೆಚ್ಚುವರಿ ಹಂಚಿಕೆಯಾಗಿ, ಆಗಸ್ಟ್ 10ರಿಂದ ಗರಿಷ್ಠ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ ರೂ.26 ದರದಲ್ಲಿ ಪಡೆಯಬಹುದು. ಓಣಂ ಹಬ್ಬದ ಸಂದರ್ಭ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಆಹಾರ ಸಚಿವರು ತಿಳಿಸಿದ್ದಾರೆ.

