ಕಾಸರಗೋಡು: ನಾಪತ್ತೆಯಾಗಿದ್ದ ಪೊಲೀಸ್ ಕಾನ್‍ಸ್ಟೇಬಲ್ ಅಂಬಲತ್ತರ ಪೆÇಲೀಸ್ ಠಾಣೆ ವ್ಯಾಪ್ತಿಯ ಅಟ್ಟೆಂಗಾನ ಪೆÇೀರ್ಕಳ ನಿವಾಸಿ ಸಾಂಸನಲ್ (27) ಅವರನ್ನು ಮಂಗಳೂರಿನ ವಸತಿಗೃಹದಿಂದ ಪತ್ತೆಹಚ್ಚಲಾಗಿದೆ. ಸೈಬರ್‍ಸೆಲ್ ಸಹಾಯದಿಂದ ಅಂಬಲತ್ತರ ಠಾಣೆ ಎಸ್.ಐ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆಸಿದ ತನಿಖೆಯಲ್ಲಿ ಸಾಂಸನಲ್ ಅರನ್ನು ಪತ್ತೆಹಚ್ಚಲಾಗಿದೆ.
ಕಾಸರಗೋಡು ಹೆಡ್ ಕ್ವಾರ್ಟರ್ಸ್‍ನಲ್ಲಿ ಸಿವಿಲ್ ಪೆÇಲೀಸ್ ಆಫೀಸರ್ ಆಗಿರುವ ಇವರು ಪ್ರಸಕ್ತ ರಾಜಪುರಂ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಕೆಲವು ದಿನಗಳ ಹಿಂದೆ ಕರ್ತವ್ಯ ಮುಗಿಸಿ ಮನೆಗೆ ತಲುಪಿದ ಬಳಿಕ ಕಾಞಂಗಾಡಿಗೆ ತೆರಳುವುದಾಗಿ ಮನೆಯಿಂದ ಹೊರಟವರು ವಾಪಸಾಗದ ಹಿನ್ನೆಲೆಯಲ್ಲಿ ಅಂಬಲತ್ತರ ಠಾಣೆ ಪೆÇಲೀಸರಿಗೆ ದೂರು ನೀಡಿದ್ದರು.

