ಕಾಸರಗೋಡು: ವಿದ್ಯಾನಗರ ಠಾಣೆ ಪೆÇಲೀಸರು ನಡೆಸಿದ ಆಪರೇಷನ್ ತೂಫಾನ್ ಕಾರ್ಯಾಚರಣೆಯನ್ವಯ ನಡೆಸಿದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಒಟ್ಟು 20.730 ಗ್ರಾಂ ಎಂಡಿಎಂಎ ಮಾದಕ ಪದಾರ್ಥ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ.
ಚೆರ್ಕಳ ಕುಂಡಕ್ಕರ ಎಂಬಲ್ಲಿ ವಿದ್ಯಾನಗರ ಠಾಣೆ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಚೆರ್ಕಳಕ್ಕೆ ಬರುತ್ತಿದ್ದ ಆಲ್ಟೋ ಕಾರು ತಡೆದು ತಪಾಸಣೆ ನಡೆಸಿದಾಗ 2.730 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದಕ್ಕೆ ಸಂಬಂಧಿಸಿ ಚೆರ್ಕಳ ಕುಞÂಕ್ಕರ ನಿವಾಸಿ ಉಣ್ಣಿಕೃಷ್ಣನ್ ಪಿ (26) ಎಂಬಾತನನ್ನು ಬಂಧಿಸಿದ್ದಾರೆ. ಸಂಚಾರಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮುಟ್ಟತ್ತೋಡಿ ಹಿದಾಯತ್ ನಗರದಲ್ಲಿ ಪೆÇಲೀಸರು ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ 18 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ನಗರ ಕುಞÂಕ್ಕಾನ ನಿವಾಸಿ ಮೊಹಮ್ಮದ್ ಅಫೀದ್ (26), ಚೇರ್ಕಳ ತಾಯಲ್ ಹೌಸ್ ನ ಅಬ್ದುಲ್ ಜಾವದ್ ಎಸ್ (27) ಎಂಬವರನ್ನು ಬಂಧಿಸಿ ಸಂಚಾರಕ್ಕೆ ಬಳಸಿದ ಕಾರನ್ನು ಪೆÇಲೀಸರು ವಶಕ್ಕೆಪಡಿಸಿಕೊಂಡಿದ್ದಾರೆ.


