ಕಾಸರಗೋಡು: ವಿವಾಹ ಭರವಸೆ ನೀಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಅಪರಾಧಿ, ಕುಂಬಳೆ ಕೊಯಿಪ್ಪಾಡಿ ಬಟ್ಟಂಪಾಡಿ ನಿವಾಸಿ ಎಸ್. ಪುರುಷೋತ್ತಮ(40) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶ ಟಿ.ಎಸ್. ರಜಿತ ಅವರು 10 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 60,000 ರೂ. ದಂಡವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಜೈಲುಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ವಿವಾಹವಾಗುವುದಾಗಿ ತಿಳಿಸಿ, 2019 ಜೂನ್ 2 ರಂದು ಅಪರಾಧಿ, ಕೊಯಿಪ್ಪಾಡಿಯಲ್ಲಿರುವ ತನ್ನ ಮನೆಯಲ್ಲಿ ಹಾಗೂ ನಂತರ ಹೊಸದುರ್ಗದ ಚಾಮುಂಡಿಕುನ್ನುವಿನಲ್ಲಿರುವ ಸಂಬಂಧಿಕರ ಮನೆಗೆ ಕರೆದೊಯ್ದು ಹಲವುಬಾರಿ ಲೈಂಗಿಕ ಕಿರುಕುಳ ನೀಡಿದ್ದರುವುದಲ್ಲದೆ, ಒಂದು ಲಕ್ಷ ರೂ. ಹಣವನ್ನೂ ಪಡೆದುಕೊಂಡಿರುವುದಾಗಿ ಯುವತಿ ಕುಂಬಳೆ ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಕುಂಬಳೆ ಪೆÇಲೀಸ್ ಠಾಣೆಯ ಅಂದಿನ ಇನ್‍ಸ್ಪೆಕ್ಟರ್ ಎಂ.ಸಿ. ಅನಿಲ್ ಹಾಗೂ ನಂತರ ಇನ್ಸ್‍ಪೆಕ್ಟರ್ ಪಿ. ಪ್ರವೀಣ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.


