ಕಾಸರಗೋಡು: ಪಳ್ಳಿಕೆರೆಯಲ್ಲಿ ಮೀನುಗಾರಿಕೆ ನಡೆಸಿ ವಾಪಸಾಗುತ್ತಿದ್ದ ದೋಣಿ ಸಮುದ್ರದಲ್ಲಿ ಮಗುಚಿ ಬಿದ್ದು ಮೂವರು ಗಾಯಗೊಂಡಿದ್ದಾರೆ. ಇದರಿಂದ ಮೀನುಗಾರಿಕೆಯಿಂದ ಸಂಗ್ರಹಿಸಲಾದ ಅಪಾರ ಪ್ರಮಾಣದ ಮೀನು ಹಾಗೂ ಮೀನುಗಾರಿಕಾ ಉಪಕರಣಗಳು ಸಮುದ್ರಪಾಲಾಗಿವೆ. ಅಪಘಾತಕ್ಕೀಡಾದ ದೋಣಿಯಲ್ಲಿ ಒಟ್ಟು 11 ಮಂದಿ ಕಾರ್ಮಿಕರಿದ್ದು, ಇದ್ದರು. ಅದರಲ್ಲಿ ತಮಯೂನ್ (40), ವಿನೋದ್ (30) ಮತ್ತು ಬಿಲಿಗೇಶ್ (40) ಎಂಬವರು ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಪಳ್ಳಿಕ್ಕೆರೆ ಮಠ ಕಡಪುರದ ಪುಷ್ಪರಾಜ್ ಎಂಬವರ ಮಾಲಿಕತ್ವದ ದೋಣಿ ಅಪಘಾತಕ್ಕೀಡಾಗಿದೆ. 3 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

