HEALTH TIPS

ಜನಸೇವೆಯಿಂದ ಬಣ್ಣದ ಲೋಕಕ್ಕೆ: ಬೆಳ್ಳಿಪರದೆ ಮೇಲೆ IAS ಅಧಿಕಾರಿ ಅಶ್ವನಿ ಕುಮಾರ್

ನವದೆಹಲಿ/ಗುವಾಹಟಿ: ಸರ್ಕಾರಿ ನೀತಿಗಳು, ಆಡಳಿತಾತ್ಮಕ ಬದಲಾವಣೆ ಹಾಗೂ ಸಂಸ್ಥೆಗಳ ಸುಧಾರಣೆಗಳ ಮೂಲಕ ಸಮಾಜ ಸೇವೆ ಮಾಡುತ್ತಿದ್ದ 2010ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಅಶ್ವನಿ ಕುಮಾರ್, ಈಗ ಬೆಳ್ಳಿಪರದೆ ಪ್ರವೇಶಿಸಿದ್ದಾರೆ.


ಮಹಿಳಾ ಸಬಲೀಕರಣ ಮತ್ತು ತಂದೆ-ಮಗಳ ಬಾಂಧವ್ಯದ ಕಥಾವಸ್ತು ಹೊಂದಿರುವ 'ದೇವಯಾನಿ' ಚಲನಚಿತ್ರದ ಮೂಲಕ ಅವರು ನಟರಾಗಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ.

ಅಸ್ಸಾಂ-ಮೇಘಾಲಯ ಕೇಡರ್‌ನ ಅಧಿಕಾರಿಯಾಗಿರುವ ಅಶ್ವನಿ ಕುಮಾರ್, ಪ್ರಸ್ತುತ ಅಸ್ಸಾಂ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಹಾಗೂ ಡಿಐಟಿಇಸಿ ನಿದೇರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಚಿತ್ರರಂಗದ ಪ್ರವೇಶವು ಆಡಳಿತ ಸೇವೆಯಿಂದ ದೂರ ಸರಿಯುವುದಲ್ಲ, ಬದಲಿಗೆ ಜನಸೇವೆಯ ಮತ್ತೊಂದು ರೂಪ ಎಂದು ‌ಅಶ್ವನಿ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

'ಆಡಳಿತ ಸೇವೆಯ ಅನುಭವವು ಜನರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ನೆರವಾಗಿದೆ ಎಂದಿರುವ ಅವರು, ನನ್ನ ಮಾಧ್ಯಮ ಬದಲಾಗಿದೆಯಷ್ಟೇ. ಆದರೆ, ಸಮಾಜ ಸೇವೆಯ ಮೂಲ ಉದ್ದೇಶ ಒಂದೇ ಆಗಿದೆ. 'ದೇವಯಾನಿ' ಸಿನಿಮಾ ನೋಡಿದ ನಂತರ ಕನಿಷ್ಠ ಒಂದು ಕುಟುಂಬವಾದರೂ ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡರೆ, ನನ್ನ ಈ ಪ್ರಯತ್ನ ಸಾರ್ಥಕ' ಎಂದು ತಿಳಿಸಿದ್ದಾರೆ.

ಕುಟುಂಬದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಸಿನಿಮಾವು ತಂದೆಯೊಬ್ಬನ ಕಾಳಜಿ ಮತ್ತು ಹೆಣ್ಣುಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಹಾಗೂ ಸಮಾಜದಲ್ಲಿ ಅವರ ಶಕ್ತಿಯನ್ನು ಮರುಚಿಂತನೆಗೆ ಒಳಪಡಿಸುವ ನಿಟ್ಟಿನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries