HEALTH TIPS

Madhya Pradesh | ಜರ್ಮನ್ ಮಹಿಳೆಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ನವದೆಹಲಿ:  ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಮಹಾತ್ಮಾಗಾಂಧಿ ಸಭಾಭವನದ ಆವರಣದಲ್ಲಿ ಕಾವಲುಗಾರನೊಬ್ಬ ಜರ್ಮನ್ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 28 ವರ್ಷ ವಯಸ್ಸಿನ ಕಾವಲುಗಾರನನ್ನು ಬಂಧಿಸಿದ್ದು, ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ.


ಜರ್ಮನಿಯ ಮಹಿಳೆಯು ಎರಡು ವರ್ಷಗಳ ಉದ್ಯೋಗ ವೀಸಾದಡಿ ಭಾರತದಲ್ಲಿ ನೆಲೆಸಿದ್ದು, ಪ್ರಸಕ್ತ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಮಂಗಳವಾರ ತನ್ನ ಸ್ನೇಹಿತೆಯ ಜೊತೆ ಇಂದೋರ್‌ಗೆ ಆಗಮಿಸಿದ್ದರು

ಮಹಾತ್ಮಾಗಾಂಧಿ ಹಾಲ್‌ಗೆ ಆಕೆ ಭೇಟಿ ನೀಡಿದಾಗ ಆಕೆಯ ಬಗ್ಗೆ ಆರೋಪಿಯು ಅಸಭ್ಯ ಪದಗಳನ್ನು ಬಳಸಿದ್ದಾನೆ. ಮಹಿಳೆಯು ತನ್ನ ಗೆಳತಿಯ ಜೊತೆ ಸೆಲ್ಫಿ ತೆಗೆಯುತ್ತಿದ್ದಾಗ, ಆಕೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆ ಸಹಾಯಕ್ಕಾಗಿ ಕೂಗಿದಾಗ ಇತರ ಸಂದರ್ಶಕರು ಆಕೆಯ ನೆರವಿಗೆ ಧಾವಿಸಿದ್ದಾರೆ.

ಘಟನೆಯಿಂದ ಮಾನಸಿಕವಾಗಿ ಆಘಾತಗೊಂಡಿದ್ದ ಜರ್ಮನ್ ಮಹಿಳೆ ಮೊದಲಿಗೆ ಪ್ರಕರಣ ದಾಖಲಿಸಲು ನಿರಾಕರಿಸಿದ್ದರು. ಆದರೆ, ಔಪಚಾರಿಕವಾಗಿ ದೂರು ದಾಖಲಿಸುವಂತೆ ಸಂತ್ರಸ್ತೆಯ ಮನವೊಲಿಸಿದ ಬಳಿಕ ಆಕೆ ದೂರು ನೀಡಿದ್ದಾರೆಂದು ಎಂ.ಜಿ.ರೋಡ್ ಠಾಣೆಯ ಉಸ್ತುವಾರಿ ಪೊಲೀಸ್ ಅಧಿಕಾರಿ ವಿಜಯ್ ಸಿಸೋಡಿಯಾ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೆಹೋರ್ ನಿವಾಸಿ, ಕಾವಲುಗಾರ ದೀಪಕ್ ಕುಮಾರ್‌ನನ್ನು ಬಂಧಿಸಿದ್ದಾರೆ. ಘಟನೆ ಸಂದರ್ಭ ಕುಮಾರ್ ಪಾನಮತ್ತನಾಗಿದ್ದ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74(ಮಹಿಳೆಯ ಶೀಲಭಂಗ ಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧಿಕ ಬಲಪ್ರಯೋಗ) ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries