ನವದೆಹಲಿ: 2026ರ ಜೂನ್‌ನಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯ ತಾತ್ಕಾಲಿಕ ಉತ್ತರ ಪ್ರತಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಾರ ಬಿಡುಗಡೆ ಮಾಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸೋಮವಾರ ತಿಳಿಸಿದೆ.
ಜತೆಗೆ, ಸಿಎಸ್‌ಐಆರ್-ನೆಟ್ ಮತ್ತು ಐಸಿಎಆರ್ (ಪಿಜಿ) ಮತ್ತು ಎಐಸಿಇ (ಪಿಎಚ್‌ಡಿ) ಪರೀಕ್ಷೆಗಳ ಉತ್ತರ ಪ್ರತಿಗಳನ್ನೂ ಬಿಡುಗಡೆ ಮಾಡಲಾಗುವುದು ಎಂದು ಅದು ತಿಳಿಸಿದೆ.
ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ವೀಕ್ಷಿಸಲು ಮತ್ತು ಸೂಚಿಸಿದ ಕಾಲಾವಧಿಯೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿರಲಿದೆ. ಪ್ರಕಟಣೆಯ ಸಮಯದಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗುವುದು ಎಂದು ಅದು ತಿಳಿಸಿದೆ.
ಯುಜಿಸಿ-ನೆಟ್ ಕೀ ಉತ್ತರ ಪತ್ರಿಕೆಗಳನ್ನು ಪ್ರಕಟಿಸಿದೇ ವಿಳಂಬ ಮಾಡುತ್ತಿರುವ ಬಗ್ಗೆ ಅಭ್ಯರ್ಥಿಗಳು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಗಸ್ಟ್ 10ರೊಳಗೆ ಕೀ ಉತ್ತರ ಪ್ರಕಟಿಸದೇ ಹೋದಲ್ಲಿ ಪ್ರತಿಭಟನೆ ಮಾಡುವುದಾಗಿ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಎನ್‌ಟಿಎ ನಿಂದ ಈ ಪ್ರಕಟಣೆ ಹೊರಬಿದ್ದಿದೆ.
ಜೂನ್ 22ರಿಂದ 30ರವರೆಗೆ ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ)-ನೆಟ್ ಪರೀಕ್ಷೆ ನಡೆಸಲಾಗಿತ್ತು ಮತ್ತು ಜುಲೈ 5ರಂದು ಮರುಪರೀಕ್ಷೆ ನಡೆಸಿತ್ತು.

