HEALTH TIPS

ಭಾರತದಲ್ಲಿ ಸಿಂಹಗಳ ಸಂಖ್ಯೆ 523 ರಿಂದ 891ಕ್ಕೆ ಏರಿಕೆ, ಕಾರಣವೇನು?

ನವದೆಹಲಿ: ಭಾರತದಲ್ಲಿ ಒಂದು ದಶಕದ ಅವಧಿಯಲ್ಲೇ ಸಿಂಹಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 2015ರಲ್ಲಿ 523 ಇದ್ದ ಏಷ್ಯಾಟಿಕ್ ಸಿಂಹಗಳ ಸಂಖ್ಯೆ 2025ರಲ್ಲಿ 891ಕ್ಕೆ ಏರಿದೆ. 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2020ರ ಆಗಸ್ಟ್ 15ರಂದು ದೊಡ್ಡ ಬೆಕ್ಕುಗಳ (ಬಿಗ್‌ ಕ್ಯಾಟ್‌) ದೀರ್ಘಕಾಲೀನ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು 'ಪ್ರಾಜೆಕ್ಟ್ ಲಯನ್' ಅನ್ನು ಘೋಷಿಸಿದರು.

ಪ್ರಸ್ತುತ, ಭಾರತದ ಗುಜರಾತ್‌ನಲ್ಲಿ ಸಿಂಹಗಳ ವ್ಯಾಪ್ತಿಯು 2020ರಲ್ಲಿ ಸುಮಾರು 30,000 ಚದರ ಕಿ.ಮೀ.ನಿಂದ ಸುಮಾರು 35,000 ಚದರ ಕಿ.ಮೀ.ಗೆ ವಿಸ್ತರಿಸಿದೆ.

ಈ ಯೋಜನೆಯು ಜೀವವೈವಿಧ್ಯ ಸಂರಕ್ಷಣೆಗೆ ಭೂಮೇಲ್ಮೈ ಮಟ್ಟದ, ಸಮಗ್ರ ಕಾರ್ಯವಿಧಾನವನ್ನು ಅನುಸರಿಸುತ್ತದೆ. ಜೊತೆಗೆ ಆವಾಸಸ್ಥಾನ ವಿಸ್ತರಣೆ, ರೋಗ ಮೇಲ್ವಿಚಾರಣೆ ಮತ್ತು ಪಶುವೈದ್ಯಕೀಯ ಬೆಂಬಲ, ವೈಜ್ಞಾನಿಕ ವನ್ಯಜೀವಿ ಸಂಖ್ಯೆ ನಿಗಾ, ತಂತ್ರಜ್ಞಾನ-ನೆರವಿನ ಮಧ್ಯಸ್ಥಿಕೆಗಳು, ಜೀವವೈವಿಧ್ಯ ಸಂರಕ್ಷಣೆ, ಪ್ರಯೋಜನ ಹಂಚಿಕೆ ಮತ್ತು ಸಮುದಾಯದ ಒಳಗೊಳ್ಳುವಿಕೆಗೆ ಒತ್ತು ನೀಡಲಾಗಿದೆ. ಇದರಿಂದ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ಭಾರತದ ಗುಜರಾತ್ ನ ಗಿರ್‌ ಅರಣ್ಯದಲ್ಲಿ ಮಾತ್ರ ಸಿಂಹಗಳಿವೆ. ಕರ್ನಾಟಕ ಸೇರಿದಂತೆ ಭಾರತದ ಇತರೆ ರಾಜ್ಯಗಳ ಅರಣ್ಯದಲ್ಲಿ ಸಿಂಹ ನೆಲೆಗೊಂಡಿಲ್ಲ. ಆದರೆ, ಮೃಗಾಲಯಗಳಲ್ಲಿ ಸಿಂಹ ಪ್ರದರ್ಶನಕ್ಕೆ ಅವಕಾಶವಿದೆ.

ವಿಶ್ವ ಸಿಂಹ ದಿನದ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, ಇದು ಅರಣ್ಯಾಧಿಕಾರಿಗಳು, ಸಂರಕ್ಷಣಾವಾದಿಗಳು ಮತ್ತು ಸ್ಥಳೀಯ ಸಮುದಾಯಗಳ ಸಮರ್ಪಣೆಯಿಂದ ಆಗಿರುವ ಸಾಧನೆ ಎಂದು ಹೇಳಿದ್ದಾರೆ,

2026ರ 'ವಿಶ್ವ ಸಿಂಹ ದಿನʼದಂದು ಅವರು ಸಿಂಹಗಳ ಸಂರಕ್ಷಣೆಯಲ್ಲಿ ಭಾರತದ ಗಮನಾರ್ಹ ಸಾಧನೆ ಶ್ಲಾಘನೀಯ. ವನ್ಯಜೀವಿಗಳು ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸುವ ದೇಶದ ಅಚಲ ಬದ್ಧತೆ ಯಥಾರೀತಿಯಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

2015ರಲ್ಲಿ 523 ಇದ್ದ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು 2025ರಲ್ಲಿ 891ಕ್ಕೆ ಸ್ಥಿರವಾಗಿ ಏರಿಕೆ ಕಂಡಿದೆ. ಏಷ್ಯಾಟಿಕ್ ಸಿಂಹವನ್ನು ಸಂರಕ್ಷಿಸುವಲ್ಲಿ ಭಾರತದ ಯಶಸ್ಸು ವನ್ಯಜೀವಿಗಳು ಮತ್ತು ಜೀವವೈವಿಧ್ಯತೆಗೆ ದೇಶದ ಬದ್ಧತೆಗೆ ಸಾಕ್ಷಿಯಾಗಿದ. ಭಾರತದ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವ ಮತ್ತು ಏಷ್ಯಾಟಿಕ್ ಸಿಂಹದ ಘರ್ಜನೆ ಮುಂದಿನ ಪೀಳಿಗೆಗೆ ಅನುರಣಿಸುವುದನ್ನು ಖಚಿತಪಡಿಸಿಕೊಳ್ಳುವ ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಸಿಂಹಗಳ ನಿರ್ಣಾಯಕ ಆವಾಸಸ್ಥಾನಗಳನ್ನು ರಕ್ಷಿಸಿ, ಸಂರಕ್ಷಣಾ ಕಾರ್ಯಕ್ರಮಗಳನ್ನು ಬಲಪಡಿಸುವ ಜೊತೆಯಲ್ಲಿ ಸಹಬಾಳ್ವೆ ಉತ್ತೇಜಿಸುವ ಮೂಲಕ ಅಭಿವೃದ್ಧಿ ಮತ್ತು ಪ್ರಕೃತಿ ಒಟ್ಟಿಗೆ ಅಭಿವೃದ್ಧಿ ಹೊಂದಬಹುದು ಎಂದು ಭಾರತವು ಜಗತ್ತಿಗೆ ತೋರಿಸಿದೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries