ಸ್ಮಾರ್ಟ್‌ಫೋನ್‌ನಲ್ಲಿ ನಮ್ಮ ವೈಯಕ್ತಿಕ Photos, ವಿಡಿಯೋಗಳು ಹಾಗೂ ದಾಖಲೆಗಳನ್ನು ಸ್ಟೋರ್ ಮಾಡುವುದು ಈಗ ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಇಂತಹ ಖಾಸಗಿ ಫೈಲ್‌ಗಳನ್ನು ಇತರರ ಕಣ್ಣಿಗೆ ಬೀಳದಂತೆ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಇದಕ್ಕಾಗಿ ಅನೇಕರು ಥರ್ಡ್-ಪಾರ್ಟಿ ಆಪ್‌ಗಳನ್ನು ಡೌನ್‌ಲೋಡ್ ಮಾಡುತ್ತಾರೆ. ಆದರೆ ಇಂತಹ ಆಪ್‌ಗಳು ಕೆಲವೊಮ್ಮೆ ನಿಮ್ಮ ವೈಯಕ್ತಿಕ ಮಾಹಿತಿಯ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಆಂಡ್ರಾಯ್ಡ್ ಮತ್ತು iPhone ಎರಡರಲ್ಲೂ ಯಾವುದೇ ಹೆಚ್ಚುವರಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡದೇ ಫೋಟೋ ಮತ್ತು ವಿಡಿಯೋಗಳನ್ನು ಮರೆಮಾಡುವ ವ್ಯವಸ್ಥೆ ಈಗಾಗಲೇ ಲಭ್ಯವಿದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಈ ಬಿಲ್ಟ್ ಇನ್ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ಖಾಸಗಿ ಫೈಲ್‌ಗಳನ್ನು ಸುರಕ್ಷಿತವಾಗಿ ಸೇವ್ ಮಾಡಬಹುದು. ಹೇಗೆ ಎಂಬುದನ್ನು ಮುಂದೆ ತಿಳಿಯೋಣ.
ಆಂಡ್ರಾಯ್ಡ್ ಫೋನ್‌ನಲ್ಲಿ Photos ಮತ್ತು ವಿಡಿಯೋ ಮರೆಮಾಡುವುದು
ಗೂಗಲ್ ಫೋಟೋ ಲಾಕ್ಡ್ ಫೋಲ್ಡರ್ ಬಳಸಿ
ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಗೂಗಲ್ ಫೋಟೋಸ್ ಅಪ್ಲಿಕೇಶನ್ ಇರುತ್ತದೆ.
– ಗೂಗಲ್ ಫೋಟೋ ತೆರೆಯಿರಿ.
– ಕಲೆಕ್ಷನ್ ಅಥವಾ ಲೈಬ್ರರಿ ವಿಭಾಗ ಓಪೆನ್ ಮಾಡಿರಿ
– ಲಾಕ್ಡ್ ಫೋಲ್ಡರ್ ಆಯ್ಕೆ ಮಾಡಿ.
– ಸ್ಕ್ರೀನ್ ಲಾಕ್ ಅಥವಾ ಫಿಂಗರ್‌ಪ್ರಿಂಟ್ ಮೂಲಕ ಪ್ರವೇಶಿಸಿ.
– ಮರೆಮಾಡಬೇಕಾದ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಿ Move to Locked Folder ಒತ್ತಿರಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಳಕೆದಾರರಿಗೆ ಸೆಕ್ಯುರ್ ಫೋಲ್ಡರ್ ಅತ್ಯುತ್ತಮ ಆಯ್ಕೆಯಾಗಿದೆ.
ಸೆಟ್ಟಿಂಗ್ಸ್ > ಸೆಕ್ಯುರಿಟಿ ಮತ್ತು ಪ್ರೈವಸಿ > ಸೆಕ್ಯುರ್ ಫೋಲ್ಡರ್
ಪಿನ್ ಅಥವಾ ಫಿಂಗರ್‌ಪ್ರಿಂಟ್ ಹೊಂದಿಸಿ.
ಗ್ಯಾಲರಿಯಿಂದ ಫೋಟೋಗಳನ್ನು ಸೆಕ್ಯುರ್ ಫೋಲ್ಡರ್‌ಗೆ ಸ್ಥಳಾಂತರಿಸಿ.
ಹಿಡೆನ್ ಅಲ್ಬಂ (ಕೆಲವು ಬ್ರಾಂಡ್‌ಗಳಲ್ಲಿ)
ಶಿಯೋಮಿ, ಒನ್‌ಪ್ಲಸ್, ಒಪ್ಪೋ, ವಿವೋ, ರಿಯಲ್‌ಮಿ ಮುಂತಾದ ಫೋನ್‌ಗಳಲ್ಲಿ ಹಿಡೆನ್ ಅಲ್ಬಂ ಅಥವಾ ಪ್ರೈವೇಟ್ ಸೇಫ್ ಆಯ್ಕೆ ಇರುತ್ತದೆ.
iPhone ನಲ್ಲಿ ಫೋಟೋ ಮರೆಮಾಡುವುದು
ಆಪಲ್ ಕೂಡ ಯಾವುದೇ ಹೆಚ್ಚುವರಿ ಆಪ್ ಇಲ್ಲದೆ ಫೋಟೋಗಳನ್ನು ಮರೆಮಾಡುವ ವ್ಯವಸ್ಥೆಯನ್ನು ನೀಡುತ್ತದೆ.
– ಫೋಟೋ ಆಪ್ ತೆರೆಯಿರಿ.
– ಬೇಕಾದ ಫೋಟೋ ಆಯ್ಕೆ ಮಾಡಿ.
– ಶೇರ್ > ಹೈಡ್ ಆಯ್ಕೆ ಮಾಡಿ.
– ಸೆಟ್ಟಿಂಗ್ಸ್ > ಫೋಟೋ > ಯೂಸ್ ಫೇಸ್ ID ಅಥವಾ ಹಿಡೆನ್ ಅಲ್ಬಮ್ ಲಾಕ್ ಸಕ್ರಿಯಗೊಳಿಸಿ.
– ಈಗ ಹಿಡೆನ್ ಅಲ್ಬಮ್ ತೆರೆಯಲು ಫೇಸ್ ID ಅಥವಾ ಪಾಸ್‌ಕೋಡ್ ಅಗತ್ಯವಾಗುತ್ತದೆ.
ಕ್ಲೌಡ್ ಬ್ಯಾಕ್‌ಅಪ್ ಬಳಸುವಾಗ ಎಚ್ಚರಿಕೆ
ಫೋಟೋಗಳನ್ನು Locked Folde ಗೆ ಸ್ಥಳಾಂತರಿಸಿದ ನಂತರ ಅವು Cloud Backup ನಲ್ಲಿ ಸೇವ್ ಆಗುತ್ತವೆಯೇ ಎಂಬುದನ್ನು ಪರಿಶೀಲಿಸಿ. ಅಗತ್ಯವಿದ್ದರೆ Backup ಸೆಟ್ಟಿಂಗ್‌ಗಳನ್ನು ಬದಲಾಯಿಸಿ.

