HEALTH TIPS

ಗ್ರಾಹಕರು, ಸಣ್ಣ ವರ್ತಕರಿಗೆ ಯುಪಿಐ ಶುಲ್ಕ ಇಲ್ಲ: ಪಿಸಿಐ

ನವದೆಹಲಿ: 2007ರ ಪಾವತಿ ಮತ್ತು ಸೆಟ್ಲ್‌ಮೆಂಟ್‌ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದರೂ ಗ್ರಾಹಕರು ಮತ್ತು ಸಣ್ಣ ವರ್ತಕರು ಯುಪಿಐ ಸೇವೆಯನ್ನು ಉಚಿತವಾಗಿ ಪಡೆಯುವುದು ಮುಂದುವರಿಯಲಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ (ಪಿಸಿಐ) ಶುಕ್ರವಾರ ತಿಳಿಸಿದೆ.


'2016ರಲ್ಲಿ ಆರಂಭವಾದಾಗಿನಿಂದಲೂ ಗ್ರಾಹಕರಿಗೆ ಯುಪಿಐ ಸೇವೆ ಉಚಿತವಾಗಿ ಸಿಗುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಯಾವುದೇ ವಹಿವಾಟು ಶುಲ್ಕವನ್ನು ಪಾವತಿಸದೆ ಡಿಜಿಟಲ್ ಪಾವತಿ ಮಾಡುವುದನ್ನು ಮುಂದುವರಿಸಬಹುದು' ಎಂದು ಪಿಸಿಐ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದೆ.

ಯುಪಿಐ ಶುಲ್ಕಗಳ ಕುರಿತು ನಡೆಯುತ್ತಿರುವ ಚರ್ಚೆಗೆ ಸ್ಪಷ್ಟನೆ ನೀಡಿರುವ ಪಿಸಿಐ, 'ಕಿರಾಣಿ ಅಂಗಡಿಗಳೂ ಸೇರಿದಂತೆ ಸಣ್ಣ ವರ್ತಕರು ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ನು ಪಾವತಿಸದೆಯೇ ಯುಪಿಐ ಪಾವತಿ ಸ್ವೀಕರಿಸುವುದನ್ನು ಮುಂದುವರಿಸಲಿದ್ದಾರೆ' ಎಂದು ಹೇಳಿದೆ.

ಯುಪಿಐ ಮತ್ತು ಇತರ ಅಧಿಸೂಚಿತ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳ ಮೂಲಕ ನಡೆಯುವ ವಹಿವಾಟುಗಳಿಗೆ ಶುಲ್ಕ ವಿಧಿಸಲು ಬ್ಯಾಂಕುಗಳು ಹಾಗೂ ಇತರ ಸೇವಾ ಪೂರೈಕೆದಾರರಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries