HEALTH TIPS

ಪದಕ ಪುರಸ್ಕೃತರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಬೇಕು: ಪ್ರಧಾನಿ ನರೇಂದ್ರ

ನವದೆಹಲಿ: ಶೈಕ್ಷಣಿಕ ಉನ್ನತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪದಕ ಪುರಸ್ಕೃತರಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.


ದೆಹಲಿ ಐಐಟಿಯ 57ನೇ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ಪದಕ ಮತ್ತು ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಒಂದೆರಡು ಹೆಣ್ಣುಮಕ್ಕಳಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

ಕ್ಷಮಿಸಿ, ಒಂದೆರಡಷ್ಟೇ ಏಕೆ, ಅವರ ಸಂಖ್ಯೆ ಇನ್ನೂ ಹೆಚ್ಚಿರಬೇಕಿತ್ತು' ಎಂದು ಹೇಳಿದರು.

'ನೀವು ಇಲ್ಲಿ ಪದವಿಯ ಜತೆಗೆ ದೇಶಕ್ಕಾಗಿ ಹೆಚ್ಚಿನದ್ದನ್ನು ಸಾಧಿಸುವ ಕನಸುಗಳೊಂದಿಗೆ ಹೊರಹೊಮ್ಮುತ್ತಿದ್ದೀರಿ' ಎಂದು ಅವರು ಪದವೀಧರರಿಗೆ ತಿಳಿಸಿದರು.

ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಮೋದಿ ಪ್ರದಾನ ಮಾಡಿದರು. ಘಟಿಕೋತ್ಸವದಲ್ಲಿ 587 ಪಿಎಚ್‌.ಡಿ ಸಂಶೋಧಕರನ್ನು ಒಳಗೊಂಡಂತೆ 3,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಪರಮ್‌ ಪ್ರಜ್ಞಾ ಉದ್ಘಾಟನೆ: ಐಐಟಿ ದೆಹಲಿಯ ಸೋನಿಪತ್‌ ಕ್ಯಾಂಪಸ್‌ನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಉನ್ನತ ಕಾರ್ಯಕ್ಷಮತೆಯ ಸೂಪರ್‌ ಕಂಪ್ಯೂಟಿಂಗ್‌ ಸೌಲಭ್ಯವಾದ 'ಪರಮ್‌ ಪ್ರಜ್ಞಾ'ವನ್ನು ಪ್ರಧಾನಿ ಉದ್ಘಾಟಿಸಿದರು.

ಈ ತಂತ್ರಜ್ಞಾನದ ನೆರವಿನಿಂದ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಸುಧಾರಿತ ಕಂಪ್ಯೂಟಿಂಗ್‌, ಅಂತರ್‌ ಶಿಸ್ತೀಯ ಸಂಶೋಧನಾ ಕ್ಷೇತ್ರಗಳಲ್ಲಿ ಸಂಸ್ಥೆಯ ಸಾಮರ್ಥ್ಯ ವೃದ್ಧಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries