HEALTH TIPS

ತೆರಿಗೆ ಮಸೂದೆ ಅಂಗೀಕಾರ; UPI ವಹಿವಾಟು ಉಚಿತವಾಗಿಯೇ ಇರಲಿದೆ: ನಿರ್ಮಲಾ ಸೀತಾರಾಮನ್

ನವದೆಹಲಿ: ತೆರಿಗೆ ಮತ್ತು ಇತರೆ ಕಾಯ್ದೆಗಳ (ತಿದ್ದುಪಡಿ) ಮಸೂದೆಯನ್ನು ಸಂಸತ್ತು ಸೋಮವಾರ(ಆ.10) ಅಂಗೀಕರಿಸಿದೆ.


ಈ ಮಸೂದೆಯು ಯುಪಿಐ ಮೇಲೆ ಯಾವುದೇ ತೆರಿಗೆಯನ್ನು ವಿಧಿಸುವುದಿಲ್ಲ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯು ತೆರಿಗೆ ರಹಿತವಾಗಿಯೇ ಉಳಿಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಯನ್ನು, ಚರ್ಚೆ ಮತ್ತು ಹಣಕಾಸು ಸಚಿವರ ಉತ್ತರದ ನಂತರ ರಾಜ್ಯಸಭೆಯು ಧ್ವನಿಮತದ ಮೂಲಕ ಅಂಗೀಕರಿಸಿದೆ.

ಈ ಮಸೂದೆಯಿಂದ ಯುಪಿಐ ಮೇಲೆ ಯಾವುದೇ ತೆರಿಗೆ ಅಥವಾ ವಹಿವಾಟು ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಪಿಐ ಪ್ರಾರಂಭವಾದಾಗಿನಿಂದಲೂ ಗ್ರಾಹಕರು ಉಚಿತವಾಗಿಯೇ ಬಳಸುತ್ತಿದ್ದಾರೆ. ಯಾವ ಭಾರತೀಯನೂ ಕೂಡ ಯಾವುದೇ ಯುಪಿಐ ಶುಲ್ಕವನ್ನು ಪಾವತಿಸುತ್ತಿಲ್ಲ. ಇದೇ ಪದ್ದತಿಯು ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಈ ಮಸೂದೆಯು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ ಹಾಗೂ ಆದಾಯ ತೆರಿಗೆ ಕಾಯ್ದೆಯ ನಡುವಿನ ಸಂಪರ್ಕವನ್ನು ತೆಗೆದುಹಾಕಲು ಮತ್ತು ಯುಪಿಐ ಹಾಗೂ ರೂಪೇ ಕಾರ್ಡ್ ವಹಿವಾಟುಗಳ 'ಶೂನ್ಯ-ಎಂಡಿಆರ್' ಚೌಕಟ್ಟನ್ನು ಮಾರ್ಪಡಿಸಲು ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡಲು ಅವಕಾಶ ನೀಡುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆ ಪೂರೈಕೆದಾರರು ಯುಪಿಐ ಮತ್ತು ರೂಪೇ ಡೆಬಿಟ್ ಕಾರ್ಡ್‌ಗಳ ಮೂಲಕ ಮಾಡುವ ಪಾವತಿಗಳಿಗೆ ಬಳಕೆದಾರರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಶುಲ್ಕ ವಿಧಿಸುವಂತಿಲ್ಲ. ಯಾವ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳು ಅಥವಾ ವಹಿವಾಟುಗಳು ಉಚಿತವಾಗಿ ಉಳಿಯಬೇಕು ಎಂಬುದನ್ನು ಅಧಿಸೂಚನೆಯ ಮೂಲಕ ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಹೆಚ್ಚಿನ ವಿದೇಶಿ ಬಂಡವಾಳವನ್ನು ಆಕರ್ಷಿಸಲು, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಕ್ಲೌಡ್ ಕಂಪನಿಗಳು ಭಾರತೀಯ ಡೇಟಾ ಸೆಂಟರ್‌ಗಳನ್ನು ಬಳಸುವುದನ್ನು ಸುಲಭಗೊಳಿಸಲು ಈ ಮಸೂದೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries