HEALTH TIPS

ಎಫ್‌ಬಿಐ 'ಟಾಪ್ 10 ಮೋಸ್ಟ್ ವಾಂಟೆಡ್' ಪಟ್ಟಿಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ವಾಷಿಂಗ್ಟನ್: ಗ್ಯಾಂಗ್‌ಸ್ಟರ್ ಸತೀಂದರ್‌ಜೀತ್‌ ಸಿಂಗ್‌ ಅಲಿಯಾಸ್‌ ಗೋಲ್ಡಿ ಬ್ರಾರ್‌ನನ್ನು ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ತನ್ನ 'ಟಾಪ್ 10 ಮೋಸ್ಟ್ ವಾಂಟೆಡ್' ಪಟ್ಟಿಗೆ ಸೇರಿಸಿದೆ.


ಅಲ್ಲದೆ ಆತನ ಬಂಧನಕ್ಕೆ ಸುಳಿವು ನೀಡಿದವರಿಗೆ ಒಂದು ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ₹9.61 ಕೋಟಿ) ಇನಾಮು ನೀಡುವುದಾಗಿ ಪ್ರಕಟಿಸಿದೆ.

ಜೈಲಿನಲ್ಲಿರುವ ಪಾತಕಿ ಲಾರೆನ್ಸ್‌ ಬಿಷ್ಣೋಯಿ ನೇತೃತ್ವದ ಸಂಘಟಿತ ಅಪರಾಧದಲ್ಲಿ ಸತೀಂದರ್‌ಜೀತ್‌ ಸಿಂಗ್‌ ಸಕ್ರಿಯನಾಗಿದ್ದು, ದಕ್ಷಿಣ ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕ ಮತ್ತು ಕೆನಡಾದಾದ್ಯಂತ ನಡೆದಿರುವ ಹಲವು ಅಪರಾಧ ಕೃತ್ಯಗಳಲ್ಲಿ ಈತನ ಕೈವಾಡವಿದೆ ಎಂದು ಎಫ್‌ಬಿಐ ತಿಳಿಸಿದೆ.

ಈತ ಅತ್ಯಂತ ಅಪಾಯಕಾರಿಯಾಗಿದ್ದು, ಮಾರಕಾಸ್ತ್ರಗಳನ್ನು ಹೊಂದಿರುತ್ತಾನೆ. ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಎಚ್ಚರಿಕೆ ವಹಿಸುವಂತೆ ತನಿಖಾ ಸಂಸ್ಥೆ ಸೂಚಿಸಿದೆ.

ರಾಜಕೀಯ ಮತ್ತು ಧಾರ್ಮಿಕ ಮುಖಂಡರ ಹತ್ಯೆ, ಗುಂಡಿನ ದಾಳಿ, ಸುಲಿಗೆ, ಅಪಹರಣ, ಹಲ್ಲೆ ಹಾಗೂ ಮಾದಕ ವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಂತಹ ಗಂಭೀರ ಅಪರಾಧ ಪ್ರಕರಣಗಳಲ್ಲಿ ಗೋಲ್ಡಿ ಬ್ರಾರ್ ಭಾಗಿಯಾಗಿದ್ದಾನೆ. ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಈತ, ಉತ್ತರ ಅಮೆರಿಕದಲ್ಲಿ ಬಿಷ್ಣೋಯಿ ಗ್ಯಾಂಗ್‌ನ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.

ಜುಲೈ 1 ರಂದು ಕ್ಯಾಲಿಫೋರ್ನಿಯಾದ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್, ಗೋಲ್ಡಿ ಬ್ರಾರ್ ವಿರುದ್ಧ ಸಂಘಟಿತ ಅಪರಾಧ, ಸುಲಿಗೆ ಮತ್ತು ಮಾದಕ ವಸ್ತುಗಳ ಸಾಗಣೆ ಸಂಚಿನ ಆರೋಪದಡಿ ಬಂಧನ ವಾರಂಟ್ ಹೊರಡಿಸಿತ್ತು.

ಭಾರತ ಮೂಲದ ಅಂತರರಾಷ್ಟ್ರೀಯ ಅಪರಾಧ ಜಾಲಗಳನ್ನು ಬೇಧಿಸಲು ಅಮೆರಿಕ ನಡೆಸುತ್ತಿರುವ 'ಆಪರೇಷನ್ ಹಾರ್ಡ್‌ಬಾಲ್' ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜುಲೈನಲ್ಲಿ ಇಂತಹ ಮೂರು ಪ್ರಮುಖ ಗ್ಯಾಂಗ್‌ಗಳಿಗೆ ಸೇರಿದ 37 ಆರೋಪಿಗಳ ವಿರುದ್ಧ ಅಮೆರಿಕ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಲ್ಲಿ ಬಿಷ್ಣೋಯಿ ಅಪರಾಧ ಜಾಲದ ಪ್ರಮುಖನಾಗಿರುವ ಗೋಲ್ಡಿ ಬ್ರಾರ್, ವಿಶ್ವದಾದ್ಯಂತ ಇರುವ ತನ್ನ ಸಹಚರರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ ಎಂದು ಎಫ್‌ಬಿಐ ಹೇಳಿದೆ.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries