HEALTH TIPS

ಇರಾನ್‌ ಸಂಧಾನಕಾರರೊಂದಿಗೆ ಅಮೆರಿಕ ಅಧಿಕಾರಿಗಳ ಮಾತುಕತೆ: ಟ್ರಂಪ್‌

ವಾಷಿಂಗ್ಟನ್‌: ಇರಾನ್ ವಿರುದ್ಧದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕದ ಹಿರಿಯ ಅಧಿಕಾರಿಗಳು ಸಂಧಾನಕಾರರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.


ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಧಾನ ಸಭೆ ನಡೆದಿರುವುದನ್ನು ದೃಢೀಕರಿಸಿದ್ದಾರೆ.  ಆದರೆ ಸಮಾಲೋಚನೆಯ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಕುರಿತು ಪ್ರಸ್ತಾಪಿಸಿದ ಟ್ರಂಪ್, 'ಇರಾನ್ ವಿರುದ್ಧದ ಈ ಯುದ್ಧದಲ್ಲಿ ಅಮೆರಿಕ ಶೀಘ್ರವೇ ಗೆಲುವು ಸಾಧಿಸಲಿದೆ. ಯುದ್ಧ ಅಂತ್ಯಗೊಂಡ ತಕ್ಷಣವೇ ಇಂಧನ ದರಗಳು ಗಣನೀಯವಾಗಿ ಇಳಿಕೆಯಾಗಲಿವೆ' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ನ್ಯೂಯಾರ್ಕ್‌ನಲ್ಲಿ ಸಂಧಾನಕಾರರನ್ನು ಭೇಟಿಯಾಗಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಸಭೆಯಲ್ಲಿ ಅಮೆರಿಕದ ಯಾವುದೇ ಪ್ರತಿನಿಧಿಗಳು ನೇರವಾಗಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ.

ಇರಾನ್ ಬಂದರುಗಳ ಮೇಲೆ ನಿರ್ಬಂಧ, ಇರಾನ್‌ಗೆ ಸೇರಿದ ಆಸ್ತಿಗಳ ಮುಟ್ಟುಗೋಲು ಹಾಗೂ ಇರಾನ್‌ನ ತೈಲ ಮಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಹಿಂದಕ್ಕೆ ಪಡೆದರೆ, ಹೊರ್ಮುಜ್ ಜಲಸಂಧಿ ತೆರೆಯಲಾಗುವುದು ಎಂದು ಇರಾನ್ ತಿಳಿಸಿತ್ತು. ಆದರೆ ಈ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿತ್ತು.

ಇನ್ನೊಂದೆಡೆ ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅರಾಘ್ಚಿ, 'ಒಂದು ವೇಳೆ ಸಂಘರ್ಷ ಮರುಕಳಿಸಿದರೆ ತಿರುಗೇಟು ನೀಡಲು ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ. ಯಾವುದೇ ಆಕ್ರಮಣ ಎದುರಾದರೂ ದೇಶದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುತ್ತೇವೆ. ಅದೇ ವೇಳೆ ರಾಜತಾಂತ್ರಿಕ ಮಾತುಕತೆಗೂ ಸಿದ್ಧರಿದ್ದೇವೆ. ಅಂತಿಮ ತೀರ್ಮಾನ ಟ್ರಂಪ್ ಅವರ ವಿವೇಚನೆಗೆ ಬಿಟ್ಟಿದ್ದು' ಎಂದು ಹೇಳಿದ್ದಾರೆ.

'ಅಮೆರಿಕದೊಂದಿಗೆ ಪರೋಕ್ಷ ಮಾತುಕತೆ ನಡೆದಿದ್ದು, ಅಧಿಕೃತ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಮಂಗಳವಾರದೊಳಗೆ ಉತ್ತರ ಸಿಗುವ ನಿರೀಕ್ಷೆ ಇದೆ' ಎಂಬ ಅರಾಘ್ಚಿ ಹೇಳಿಕೆಯನ್ನು 'ಅಲ್ ಜಜೀರಾ' ವರದಿ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries