ಕಾಸರಗೋಡು: ತಂದೆ ಹಾಗೂ ಮಾವನ ಮಗನ ಕಿರುಕುಳದಿಂದ 13ರ ಹರೆಯದ ಬಾಲಕಿ ಗರ್ಭಿಣಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪೋಕ್ಸೋ ಅನ್ವಯ ಬಾಲಕಿ ತಂದೆ ಹಾಗೂ ಮಾವನ ಮಗನ ವಿರುದ್ಧ ಕೇಸು ದಾಖಲಿಸಿಕೊಮಡಿದ್ದಾರೆ.
ಕಾಸರಗೋಡು ಪೆÇಲೀಸ್ ಸಬ್ ಡಿವಿಶನ್ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ ತಂದೆ ಹಾಗೂ ಮಾವನ ಮಗ ಸೇರಿ ಕಿರುಕುಳ ನೀಡಿರುವ ವಿಷಯ ಬಹಿರಂಗಗೊಂಡಿತ್ತು.


