ಕಾಸರಗೋಡು: ನಗರದ ಅಣಂಗೂರು ಜೆಪಿ ಕಾಲನಿ ನಿವಾಸಿ, ಸಂಘಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದ ಜ್ಯೋತಿಷ್ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದ ತಳಂಗರೆ ಪಳ್ಳಿಕಾಲ್, ಪಡುಪ್ಪಿಲ್ ಮನೆಯ ಅಬ್ದುಲ್ ಷಹೀರ್ ಅನಸ್( 33)ನನ್ನು ತಮಿಳುನಾಡಿನ ಕೊಯಮತ್ತೂರಿಂದ ಬಂಧಿಸಲಾಗಿದೆ.
ಜ್ಯೋತಿಷ್ ಅವರನ್ನು ಕಡಿದು ಕೊಲೆಗೈಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು 13ವರ್ಷಗಳ ನಂತರ ಬಂಧಿಸಲಾಗಿದೆ. ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿತ್ತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ. 2013ರಲ್ಲಿ ಜ್ಯೋತಿಷ್ ಕೊಲೆ ಯತ್ನ ಪ್ರಕರಣ ನಡೆದಿತ್ತು.
ಬೈಕಿನಲ್ಲಿ ಸಂಚರಿಸುತ್ತಿದ್ದ ಜ್ಯೋತಿಷ್ ಅವರನ್ನು ಚೆಂಗಳದಲ್ಲಿ ತಡೆದು ನಿಲ್ಲಿಸಿ ಆಕ್ರಮಿಸಿ ಕೊಲೆಗೆ ಯತ್ನಿಸಲಾಗಿತ್ತು. ಅಬ್ದುಲ್ ಷಹೀನ್ ಅನಸ್‍ನನ್ನು ಬಂಧಿಸಲಾಗಿದ್ದರೂ, ನಂತರ ಜಾಮೀನು ಪಡೆದು ತಲೆಮರೆಸಿಕೊಂಡಿದ್ದನು. ಈ ಮಧ್ಯೆ ಜ್ಯೋತಿಷ್ ವರ್ಷಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದರು.


