ಕಾಸರಗೋಡು: ಕೆಲಸ ಕೊಡಿಸುವ ಭರವಸೆಯೊಡ್ಡಿ ಕರ್ನಾಟಕ ಮೂಲದ ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಬೇಕಲ ಪಳ್ಳಿಕೆರೆ ನಿವಾಸಿ ಸೈಫ್ ಆಸಿಫ್ (28)ಬಂಧಿತ.
ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿದ್ದ ಈತ ತಲೆಮರೆಸಿಕೊಂಡು, ತನ್ನ ಅಡಗುತಾಣ ಬದಲಾಯಿಸುತ್ತಿರುವ ಮಧ್ಯೆ ಈತನನ್ನುಬಂಧಿಸಲಾಗಿದೆ.
ಪ್ರಕರಣದ ಇನ್ನೊಬ್ಬ ಆರೋಪಿ ಹೊಸದುರ್ಗ ತಾಲೂಕಿನ ಇರಿಯ ಪಾರಮ್ಮಲ್ ನಿವಾಸಿ ಬಷೀರ್ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು. ಈತ ಕರ್ನಾಟಕ ಮೂಲದ ಯುವತಿಯನ್ನು ಉದ್ಯೋಗದ ಭರವಸೆ ನೀಡಿ ಕಾಞಂಗಾಡು ಬಳಿಯ ಅಂಬಲತ್ತರ ಎಂಬಲ್ಲಿಗೆ ಕರೆ ತಂದಿದ್ದನು. ಮೊದಲಿಗೆ ಈತ ಲೈಂಗಿಕ ದೌರ್ಜನ್ಯ ನಡೆಸಿದ ಬಳಿಕ ಎರಡನೇ ಆರೋಪಿಗೆ ಹಸ್ತಾಂತರಿಸಿದ್ದನು. ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


