ಬದಿಯಡ್ಕ: ನೀರ್ಚಾಲಿನಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.14 ರಂದು ಸೋಮವಾರ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನೀರ್ಚಾಲು ಮಹಾಜನ ಸಂಸ್ಕøತ ಶಾಲಾ ವಠಾರದಲ್ಲಿ ಜರಗಲಿರುವುದು. ಅಂದು ಬೆಳಗ್ಗೆ 7ಕ್ಕೆ ದೀಪಪ್ರತಿಷ್ಠೆ, 7.30ಕ್ಕೆ ವೇದಮೂರ್ತಿ ಶಿವಶಂಕರ ಭಟ್ ಪಾಂಡೇಲು ಇವರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಹೋಮ, ನಾಗತಂಬಿಲ, 7 ರಿಂದ ಓಂಕಾರ್ ಬಾಲಗೋಕುಲ ಭಜನಾ ಸಂಘ ರತ್ನಗಿರಿ, ಶ್ರೀ ಸುಬ್ರಹ್ಮಣ್ಯ ಭಜನಾ ಸಂಘ ಕುಮಾರಮಂಗಲ ಹಾಗೂ ಶ್ರೀಮಾತಾ ಹವ್ಯಕ ಭಜನ ಸಂಘ ಬದಿಯಡ್ಕ ಇವರಿಂದ ಭಜನೆ, 10.30 ರಿಂದ ಕೃಷ್ಣಕುಮಾರಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, 12ಕ್ಕೆ ಶ್ರೀ ಸತ್ಯವಿನಾಯಕ ಪೂಜೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಮಧ್ಯಾಹ್ನ 1 ರಿಂದ ಜ್ಯೋತಿಷಿ ಕೃಷ್ಣಮೂರ್ತಿ ಪುದುಕೋಳಿ ಇವರಿಂದ ಧಾರ್ಮಿಕ ಪ್ರವಚನ, 2 ರಿಂದ ಯಕ್ಷಾಲಯ ಮಂಗಳೂರು ಮತ್ತು ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಸಿಕಾ ಪರಿಣಯ-ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ.


