HEALTH TIPS

ಆಗಸ್ಟ್‌ನಲ್ಲಿ ದೇಶದ ಕಚೇರಿಗಳಲ್ಲಿ ನೇಮಕಾತಿ ಶೇ 14ರಷ್ಟು ಏರಿಕೆ

ಮುಂಬೈ (PTI): ಆಗಸ್ಟ್‌ ತಿಂಗಳಿನಲ್ಲಿ ದೇಶದ ಕಚೇರಿಗಳಲ್ಲಿ ಕೆಲಸ ಮಾಡುವ ವೃತ್ತಿಪರರ ನೇಮಕಾತಿ ಪ್ರಮಾಣವು ಶೇ 14ರಷ್ಟು ಹೆಚ್ಚಳ ಆಗಿದೆ ಎಂದು 'ನೌಕ್ರಿ.ಕಾಂ' ವರದಿ ಹೇಳಿದೆ. ವಾಹನ ಉದ್ಯಮ, ಆರೋಗ್ಯಸೇವೆ ಮತ್ತು ರಿಟೇಲ್‌ ವಲಯಗಳಲ್ಲಿ ನೇಮಕಾತಿ ಹೆಚ್ಚಳವು ಒಟ್ಟಾರೆ ನೇಮಕಾತಿ ಏರಿಕೆಯಾಗುವುದಕ್ಕೆ ಕಾರಣವಾಗಿದೆ.


ಆಗಸ್ಟ್‌ ತಿಂಗಳಲ್ಲಿ ಐ.ಟಿ ಹಾಗೂಐ.ಟಿ ಹೊರತುಪಡಿಸಿದ ವಲಯ ಗಳಲ್ಲಿ, ಬೇರೆ ಬೇರೆ ಹಂತಗಳ ಅನುಭವ ಹೊಂದಿರುವವರ ನೇಮಕಾತಿಯು ಹೆಚ್ಚಳ ಕಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಕಳೆದ ವರ್ಷದಲ್ಲಿ ಹಬ್ಬಗಳ ಋತು ಆಗಸ್ಟ್‌ನಲ್ಲೇ ಆರಂಭ ಆಗಿತ್ತು. ಅದು ಈ ಬಾರಿ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿಯ ಏರಿಕೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದೆ.

'ನೇಮಕಾತಿಯಲ್ಲಿನ ಗತಿಯ ಬಗ್ಗೆ ಹೆಚ್ಚು ಸ್ಪಷ್ಟವಾದ ಚಿತ್ರಣವು ನಮಗೆ ಹಬ್ಬಗಳ ಋತುವಿನಲ್ಲಿ ಗೊತ್ತಾಗುತ್ತದೆ' ಎಂದು ಇನ್ಫೊ ಎಜ್‌ ಲಿಮಿಟೆಡ್‌ನ ಸಿಇಒ ಹಿತೇಶ್ ಒಬೆರಾಯ್ ಹೇಳಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries