HEALTH TIPS

ಕಾರ್ಮಾರಿನ ಶ್ರೀಮಹಾವಿಷ್ಣು ಯುವಕವೃಂದ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ 15 ಮಂದಿ ಶ್ರೇಷ್ಠ ಕೃಷಿಕರಿಗೆ 'ಅನ್ನದಾತ ಪ್ರಶಸ್ತಿ' ಪ್ರದಾನ

ಬದಿಯಡ್ಕ: ಕೃಷಿ, ಗ್ರಾಮೀಣ ಸಂಸ್ಕøತಿ ಹಾಗೂ ಕ್ರೀಡಾ ಪರಂಪರೆಯನ್ನು ಒಟ್ಟುಗೂಡಿಸಿ ಕಾರ್ಮಾರಿನ ಶ್ರೀ ಮಹಾವಿಷ್ಣು ಯುವಕವೃಂದ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದ ಸುಮಾರು 15 ಮಂದಿ ಶ್ರೇಷ್ಠ ಕೃಷಿಕರನ್ನು ಗುರುತಿಸಿ 'ಅನ್ನದಾತ ಪ್ರಶಸ್ತಿ' ನೀಡಿ ಗೌರವಿಸಿರುವುದು ವಿಶೇಷತೆಯಾಗಿದೆ. ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರ ಪರಿಸರದ ಗದ್ದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಪರಿಸರವಾದಿ, ಗ್ರೀನ್ ಹೀರೋ ಆಫ್ ಇಂಡಿಯ ಪ್ರಶಸ್ತಿ ಪುರಸ್ಕೃತ ಡಾ. ಆರ್.ಕೆ. ನಾಯರ್ ಸುಳ್ಯ ಅವರು ಕೃಷಿಕರನ್ನು ಸನ್ಮಾನಿಸಿದರು. ಬಳಿಕ  ಮಾತನಾಡಿದ ಅವರು  ಕೃಷಿಕರನ್ನು ಗುರುತಿಸುವುದು ಭೂಮಿ ತಾಯಿಯನ್ನು ಗೌರವಿಸಿದಂತಹ ಕೆಲಸ. ಕೈಕೆಸರಾದರೆ  ಬಾಯಿ ಮೊಸರು ಎಂಬ ಕೆಸರು ಗದ್ದೆಯ ಮಹತ್ವವನ್ನು ಅರ್ಥಪೂರ್ಣವಾಗಿಸಿ ಹೊಸ ಜನಾಂಗಕ್ಕೆ ತಿಳಿಯಪಡಿಸುವ ಜತೆಗೆ ಕೃಷಿಕರನ್ನು ಗೌರವಿಸಿದ ಸಂಘಟನಾತ್ಮಕ ಕಾರ್ಯ ಸ್ತುತ್ಯಾರ್ಹ ಎಂದರು.   


ಯುವಕ ಸಂಘದ ಅಧ್ಯಕ್ಷ ಪುರುಷೋತ್ತಮ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಭಟ್ ಪುದುಕೋಳಿ, ಯುವಕ ವೃಂದದ ಅಧ್ಯಕ್ಷ ಪುರುಷೋತ್ತಮ ಕಾರ್ಮಾರ್ ಉಪಸ್ಥಿತರಿದ್ದರು. ಈ ಪ್ರದೇಶದ ಕೃಷಿಕರಾದ ಗೋಪಾಲಕೃಷ್ಣ ನಾವುಡ, ಕೊಲ್ಲಂಗಾನ, ಗಂಗಾಧರ ರೈ ಕಾರ್ಮಾರು, ಡಿ. ಕೃಷ್ಣ ನಾಯ್ಕ ದೇವರಕೆರೆ, ಸುಂದರ ನಾಯ್ಕ ಸಿ.ಎಚ್. ಚುಕ್ಕಿನಡ್ಕ, ತಿರುಮಲೇಶ್ವರ ಮಾನ್ಯ, ಲಕ್ಷ್ಮಿ ಸುಬ್ಬಪ್ಪ ನಾಯ್ಕ, ವೇದಾವತಿ ರೈ, ಸುಲೋಚನಾ ರೈ, ಕಮಲಾ ಪೂಜಾರ್ತಿ, ಕಮಲಾ ಉಳ್ಳೋಡಿ, ರೋಹಿಣಿ, ಮೇರಿ ಡಿಸೋಜಾ, ಜೋಸ್ಮಿನ್, ಗಿರಿಜಾ ಉಳ್ಳೋಡಿ ಹಾಗೂ ಗೀತಾ ರಾಮ ನಾಯ್ಕ ಅವರನ್ನು ಗೌರವಿಸಲಾಯಿತು.ಮಹೇಶ್ ವಳಕುಂಜ ಸ್ವಾಗತಿಸಿ, ರಂಜಿತ್ ಯಾದವ್ ಎ ಎಸ್., ವಂದಿಸಿದರು. ಸಂತೋಷ ಕುಮಾರ್ ಮಾನ್ಯ ಹಾಗೂ ಶರತ್ ಮಾಸ್ತರ್ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries