ಕಾಸರಗೋಡು: ತೆಂಗು ಕೇವಲ ವಾಣಿಜ್ಯ ಬೆಳೆಯಲ್ಲ. ಇದು ಮನುಷ್ಯನ ಆರೋಗ್ಯ ಕಾಪಾಡುವ ಖಾದ್ಯವೂ ಆಗಿದೆ. ಕೃಷಿ ವಲಯ ಇಂದು ಅತಂತ್ರ ಸ್ಥಿತಿಯಲ್ಲಿದ್ದು, ಇಂತಹ ವಿಷಮ ಪರಿಸ್ಥಿತಿಯಿಂದ ಕೃಷಿಕರನ್ನು ಪಾರುಮಾಡಲು ಗಂಭೀರ ಚಿಂತನೆ ಅಗತ್ಯ ಎಂದು ನಿಟ್ಟೆ ಡೀಮ್ಡ್ ಯೂನಿವರ್ಸಿಟಿ ಮಾಜಿ ಕುಲಪತಿ ಹಾಗೂ ಉಪಾಧ್ಯಕ್ಷ (ISR & CRL) ಡಾ. ಬಿ. ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐನಲ್ಲಿ, ವಿಶ್ವ ತೆಂಗು ದಿನಾಚರಣೆ ಅಂಗವಾಗಿ "ಅನಿಶ್ಚಿತತೆಯ ಕಾಲದಲ್ಲಿ ತೆಂಗು: ಆಹಾರ, ಇಂಧನ ಮತ್ತು ಜೀವನೋಪಾಯದ ಭದ್ರತೆ" ಎಂಬ ಧ್ಯೇಯವಾಕ್ಯದೊಂದಿಗೆ ನಡೆದ 'SHITIJ 2.0' ಎಂಬ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
'ಕಲ್ಪ ವೃಕ್ಷ' ಉಪಕ್ರಮ ಮತ್ತು ಸಿಪಿಸಿಆರ್‍ಐನ ಹೊಸ ತಂತ್ರಜ್ಞಾನಗಳು ಕೃಷಿಯಲ್ಲಿ ಹೊಸ ಆವಿಷ್ಕಾರದೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೆ ಖ್ಯಾತಿ ಪಡೆದಿರುವುದಾಗಿ ತಿಳಿಸಿದರು.
ಐಸಿಎಆರ್-ಸಿಪಿಸಿಆರ್‍ಐ ನಿರ್ದೇಶಕ ಡಾ. ಹೆಬ್ಬಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಪಿಸಿಆರ್‍ಐ ತನ್ನ ತಳಿ ಮತ್ತು ತಂತ್ರಜ್ಞಾನ ಆವಿಷ್ಕರಿಸಿಕೊಂಡು ಬರುವ ಮೂಲಕ ತೋಟಗಾರಿಕಾ ಬೆಳೆಗಳ ವಲಯವನ್ನು ಸಬಲೀಕರಣಗೊಳಿಸುವುದಕ್ಕೆ ಆದ್ಯತೆ ನೀಡುತ್ತಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಸವಾಲುಗಳು, ಕೀಟ ಮತ್ತು ರೋಗಗಳಂತಹ ಪರೋಕ್ಷ ಸಮಸ್ಯೆಗಳಿಂದ ಕೃಷಿಕರನ್ನು ಪಾರುಮಾಡುವಲ್ಲಿ ಸಿಪಿಸಿಆರ್‍ಐ ಶ್ರಮಿಸುತ್ತಿದೆ. ನರ್ಸರಿ ಉದ್ಯಮಿಗಳಿಗೆ ತಳಿಗಳ ಪರವಾನಗಿ ನೀಡುವ ಮೂಲಕ ಸಸಿಗಳ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಐಸಿಎಆರ್ (ICAR) ಸಂಸ್ಥೆಗಳು ಹಾಗೂ ಇತರರ ಸಹಯೋಗದೊಂದಿಗೆ ವಿವಿಧ ಸವಾಲುಗಳನ್ನು ಬಗೆಹರಿಸುವ ಪ್ರಯತ್ನ ಮುಂದುವರಿಸಿರುವುದಾಗಿ ತಿಳಿಸಿದ ಅವರು, ಸಿಪಿಸಿಆರ್‍ಐನ ತಳಿ ಸುಧಾರಣೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗೊಂಡ ಕಾರ್ಯಕ್ರಮಗಳಲ್ಲಿನ ಸಾಧನೆಗಳ ಬಗ್ಗೆ ವಿವರಿಸಿದರು.
ಪುತ್ತೂರು ಗೇರು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಜೆ. ದಿನಕರ ಅಡಿಗ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್‍ಮೆಂಟ್ (ಬೆಂಗಳೂರು)ನ ನಿರ್ದೇಶಕರಾದ ಡಾ. ಎಸ್. ಸೆಂಥಿಲ್ ವಿನಾಯಕಂ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಐಸಿಎಆರ್-ಸಿಪಿಸಿಆರ್‍ಐನ ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸಾಮಿ ಅವರು 'SಊIಖಿIಎ 2.0' (ಕ್ಷಿತಿಜ್ 2.0) ಅನ್ನು ಪರಿಚಯಿಸಿದರು. ಐಸಿಎಆರ್-ಎನ್‍ಆರ್‍ಸಿ ನಿರ್ದೇಶಕ ಡಾ. ಕೆ.ವಿ. ಪ್ರಸಾದ್, ಐಸಿಎಆರ್-ಆಸಿಇಆರ್ ನಿರ್ದೇಶಖ ಡಾ. ಅನೂಪ್ ದಾಸ್ (ನಿರ್ದೇಶಕರು, Iಅಂಖ-ಖಅಇಖ) ಮತ್ತು ಎಐಸಿಆರ್‍ಪಿ ಪ್ಲಾಂಟೇಶನ್ ಕಾರ್ಪ್ ಯೋಜನಾ ಸಂಯೋಜಕ ಡಾ. ಬಿ.ಎ. ಜೆರಾರ್ಡ್ ಆನ್‍ಲೈನ್ ಮೂಲಕ ಭಾಗವಹಿಸಿದ್ದರು. ಈ ಸಂದರ್ಭ ಕೇರಳ, ಕರ್ನಾಟಕ, ತಮಿಳ್ನಾಡು, ಆಂಧ್ರ ಪ್ರದೇಶದ ತಲಾ ಇಬ್ಬರು ಪ್ರಗತಿಪರ ಕೃಷಿಕರನ್ನು ಗೌರವಿಸಲಾಯಿತು.
ವಿವಿಧ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಉತ್ತಮ ತೋಟಗಾರಿಕಾ ಪದ್ಧತಿ, ಕೀಟಗಳ ನಿರ್ವಹಣೆ, ಪೋಷಕಾಂಶ ನಿರ್ವಹಣೆ ಬಗೆಗಿನ ಕೈಪಿಡಿ, ಪ್ರಕಟಣೆಗಳನ್ನು ಅನಾವರಣಗೊಳಿಸಲಾಯಿತು.
ಬೆಳೆ ಸುಧಾರಣಾ ವಿಭಾಗದ ಮುಖ್ಯಸ್ಥೆ ಡಾ. ವಿ. ನಿರಾಲ್ ಸ್ವಾಗತಿಸಿದರು. ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸಾಮಿ ವಂದಿಸಿದರು.
ನಂತರ ಬೆಂಗಳೂರಿನ 'ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್‍ಮೆಂಟ್'ನ ನಿರ್ದೇಶಕರಾದ ಡಾ. ಎಸ್. ಸೆಂಥಿಲ್ ವಿನಾಯಕಂ ಅವರು ಪಾಲುದಾರರ ಸಭೆಯನ್ನು ಉದ್ಘಾಟಿಸಿದರು. ತೋಟಗಾರಿಕಾ ಬೆಳೆಗಳಲ್ಲಿನ ತೀವ್ರ ಹವಾಮಾನ ವೈಪರೀತ್ಯದ ಸವಾಲುಗಳ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿರುವ ಅಧಿವೇಶನ ಸೆ. 3ರಂದು ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಕೃಷ್ಯುತ್ಪನ್ನಗಳ ಪ್ರದರ್ಶನ ನಡೆಯಿತು.

