HEALTH TIPS

ಸಿಕ್ಕಿಂನಲ್ಲಿ ಭೂಕುಸಿತದ ಅಪಾಯ: 161 ಜನರ ಸ್ಥಳಾಂತರ

ಗ್ಯಾಂಗ್ಟಕ್‌: ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಪಶ್ಚಿಮ ಸಿಕ್ಕಿಂನ ಗಯಾಲ್‌ಶಿಂಗ್‌ ಜಿಲ್ಲೆಯಲ್ಲಿ ಭೂಕುಸಿತ ಅಪಾಯ ಹೆಚ್ಚಿದ್ದು, ಜಿಲ್ಲಾಡಳಿತವು ಸುಮಾರು 161 ಜನರನ್ನು ಸ್ಥಳಾಂತರಿಸಿದೆ.


'ಮುನ್ನೆಚ್ಚರಿಕೆ ಕ್ರಮವಾಗಿ ರಿಂಬಿ ಗ್ರಾಮ ಪಂಚಾಯಿತಿ ಕೇಂದ್ರಕ್ಕೆ 128 ಜನರನ್ನು ಸ್ಥಳಾಂತರಿಸಲಾಗಿದ್ದು, ಸಿಂಗ್ಟಮ್‌ನಲ್ಲಿ 33ಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮಂದಿರ ಪಾಯಿಂಟ್‌ ಸುತ್ತಮುತ್ತಲಿನ ಪರಿಸ್ಥಿತಿ ಹದಗೆಟ್ಟಿದ್ದು, ಭೂಕುಸಿತದ ವರದಿಯಾಗಿದೆ. ನೀರಿನ ಪ್ರಮಾಣ ದಿಢೀರ್‌ ಹೆಚ್ಚುತ್ತಿರುವ ಕಾರಣ ನದಿ ತೀರದಲ್ಲಿರುವ ಮನೆಗಳಿಗೆ ಅಪಾಯವನ್ನುಂಟು ಮಾಡಿದೆ' ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಿಂಬಿಯಲ್ಲಿರುವ ಆರ್‌ಸಿಸಿ ಸೇತುವೆಯೂ ಸಹ ನೀರಿನ ಹರಿವು ಮತ್ತು ಅವಶೇಷಗಳ ಪ್ರಮಾಣ ಹೆಚ್ಚಾದ ಕಾರಣ ಕೊಚ್ಚಿಹೋಗಿದೆ. ಇದರಿಂದ ರಿಂಬಿ ನದಿಯು ತನ್ನ ದಿಕ್ಕನ್ನು ಬದಲಾಯಿಸಿದ್ದು, ರಸ್ತೆಯ ಪಕ್ಕದ ಭಾಗವು ಸವೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries