HEALTH TIPS

ತಮಿಳುನಾಡು: 18 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ದ್ರವ್ಯಗಳು ವಶ

ತೂತ್ತುಕುಡಿ: ತಮಿಳುನಾಡಿನ ಅಧಿಕಾರಿಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸುಮಾರು 18 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ತೂತ್ತುಕುಡಿಯಲ್ಲಿ ಮಾಲ್ದೀವ್ಸ್‌ಗೆ ಬೋಟ್ ಮೂಲಕ ಅಕ್ರಮವಾಗಿ ಸಾಗಿಸಲು ಯೋಜನೆ ರೂಪಿಸಲಾಗಿದ್ದ ಹಶಿಷ್ ತೈಲ ಮತ್ತು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೋರ್ವಳಿಂದ ವಶಪಡಿಸಿಕೊಂಡ ಹೈಡ್ರೋಪೋನಿಕ್ ಗಾಂಜಾ ಇವುಗಳಲ್ಲಿ ಸೇರಿವೆ. 


ತೂತ್ತುಕುಡಿ ಕಾರ್ಯಾಚರಣೆಯಲ್ಲಿ ಪೊಲೀಸರು 17 ಕೋಟಿ ರೂ ಮೌಲ್ಯದ 67 ಕೆಜಿ ಹಶಿಷ್ ತೈಲ ವಶಪಡಿಸಿಕೊಂಡು ನಾಲ್ವರು ಸ್ಥಳೀಯ ನಿವಾಸಿಗಳನ್ನು ಬಂಧಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಕೌಲಾಲಂಪುರದಿಂದ ಬಂದಿಳಿದ ಭಾರತೀಯ ಮಹಿಳೆಯನ್ನು ಚೆನ್ನೈ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಯುನಿಟ್ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದರು. ಗ್ರೀನ್ ಚಾನೆಲ್ ಮೂಲಕ ಯಾವುದೇ ಘೋಷಣೆ ಮಾಡದೆ ಸಾಗಲು ಯತ್ನಿಸಿದ್ದ ಆಕೆಯ ಲಗೇಜ್ ತಪಾಸಣೆ ನಡೆಸಿದಾಗ 3.424 ಕೆಜಿ ತೂಕದ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ 1.2 ಕೋಟಿ ರೂ.ಗಳಾಗಿವೆ.

ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries