HEALTH TIPS

'ಸಿಗದ ಆಶ್ವಾಸನೆ, ಮಾತುಕತೆಯೂ ಇಲ್ಲ': ಸೆಪ್ಟೆಂಬರ್ 19ರಿಂದ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ ವಾಂಗ್‌ಚುಕ್; Video

ಲಡಾಖ್: ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್‌ ಲಡಾಖ್ ವಿಚಾರದಲ್ಲಿ ಮತ್ತೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. 


ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಹಾರಗಳನ್ನು ವಿರೋಧಿಸಿ ಅಂದಿನ ಕೇಂದ್ರ ಶಿಕ್ಷಣ ಸಚಿವರ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಒತ್ತಾಯಿಸಿ ಜೂ.28ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಕೊನೆಗೆ ಬರೋಬ್ಬರಿ 26 ದಿನಗಳ ಬಳಿಕ ಜು.23 ರಂದು ತಮ್ಮ ಉಪವಾಸವನ್ನು ಕೈಬಿಟ್ಟಿದ್ದರು. ದೇಶದಲ್ಲಿನ ಸಂಭಾವ್ಯ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದೊಂದಿಗಿನ ದೀರ್ಘ ಮಾತುಕತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.

ಆದರೆ, ಇದೀಗ ಕೇಂದ್ರ ಗೃಹ ಸಚಿವಾಲಯದೊಂದಿಗಿನ ಸಭೆಯು ಸಕಾರಾತ್ಮಕ ವಾತಾವರಣದಲ್ಲಿ ನಡೆದಿದ್ದರೂ ಯಾವುದೇ ಸ್ಪಷ್ಟ ಫಲಿತಾಂಶ ಸಿಗದಿದ್ದಕ್ಕೆ ನಿರಾಶೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಲಡಾಖ್‌ನ ಅಸ್ಮಿತೆ ಮತ್ತು ಸ್ವರೂಪವನ್ನು ಬದಲಾಯಿಸುವುದಿಲ್ಲ ಎಂಬ ಭರವಸೆಯನ್ನು ತಾವು ಕೋರಿದ್ದಾಗಿ ವಾಂಗ್‌ಚುಕ್ ಹೇಳಿದ್ದಾರೆ. ಸರ್ಕಾರ ಯಾವುದೇ ಭರವಸೆ ನೀಡಲು ವಿಫಲವಾದರೆ, ಸೆಪ್ಟೆಂಬರ್ 19ರಿಂದ 24ರವರೆಗೆ ಹೊಸ ಹೋರಾಟವನ್ನು ಆರಂಭಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.


VIDEO | Delhi: "Will launch a fresh stir from September 19 to 24 over Ladakh issues if we don't get any assurance from the government," warns activist Sonam Wangchuk. (Full video available on PTI Videos - ptivideos.com)






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries