ಕುಂಬಳೆ: ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಪ್ರಿಯದರ್ಶಿನಿ ಬಸ್‍ನಲ್ಲಿ ಪ್ರಯಾಣಿಕನ 20ಸಾವಿರ ರೂ. ಕಳವುಗೈದಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರರು ಕೇಸು ದಾಖಲಿಸಿಕೊಂಡಿದ್ದಾರೆ.
ಕಳತ್ತೂರು ನಿವಾಸಿ, ಪಿಗ್ಗಿ ಸಂಗ್ರಾಹಕರಾಗಿರುವ ರಾಘವ (49) ಎಂಬವರು ಹಣ ಕಳದುಕೊಂಡವರು. ಶನಿವಾರ ಬೆಳಿಗ್ಗೆ ಕಾಸರಗೋಡಿಗೆ ತೆರಳಿದ್ದ ರಾಘವ ಬ್ಯಾಂಕ್‍ನಲ್ಲಿ ಹಣ ಪಾವತಿಸಿದ ಬಳಿಕ 20 ರೂಪಾಯಿ ನೋಟುಗಳ ಕಟ್ಟುಗಳನ್ನು ಪಡೆದು ಬ್ಯಾಗ್‍ನಲ್ಲಿ ಇರಿಸಿದ್ದರು. ನಂತರ ಕುಂಬಳೆಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ ಏರಿದ್ದು, ಬಸ್ ಮೊಗ್ರಾಲ್‍ಗೆ ತಲುಪಿದಾಗ ಬ್ಯಾಗ್‍ನ ಸಿಪ್ ತೆರೆದ ಸ್ಥಿತಿಯಲ್ಲಿ ಕಂಡುಬಂದಿತ್ತು. ನಂತರ ಪರಿಶೀಲಿಸಿದಾಗ ಬ್ಯಾಗ್‍ನಲ್ಲಿದ್ದ ಹಣ ಕಳವಾಗಿತ್ತು. ಈ ವಿಷಯವನ್ನು ರಾಘವ ಬಸ್ ನಿರ್ವಾಹಕನಲ್ಲಿ ತಿಳಿಸಿದ್ದ ಹಿನ್ನೆಲೆಯಲ್ಲಿ ಬಸ್ಸನ್ನು ಕುಂಬಳೆ ಪೆÇಲೀಸ್ ಠಾಣೆಗೆ ತಲುಪಿಸಿ ಪ್ರಯಾಣಿಕರನ್ನು ತಪಾಸಣೆ ನಡೆಸಿದರೂ ಹಣ ಪತ್ತೆಯಾಗಲಿಲ್ಲ. ಇದರಿಂದ ಬಸ್ ಅರ್ಧ ಗಂಟೆ ವಿಳಂಬವಾಗಿ ಸಂಚರ ನಡೆಸಬೇಕಾಯಿತು. ಹಣ ಕಳವು ಬಗ್ಗೆ ಕುಂಬಳೆ ಪೆÇಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


