ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಆದೂರು ಬಳ್ಳಕ್ಕಾಡ್ ನಿವಾಸಿ, ಆಟೋ ಚಾಲಕ ಸದಾನಂದ ಎಂಬವರ ಮನೆಗೆ ಹಾಡಹಗಲು ನುಗ್ಗಿದ ಕಳ್ಳರು ಏಳುವರೆ ಪವನು ಚಿನ್ನಾಭರಣ ದೋಚಿದ್ದಾರೆ. ಮನೆಯ ಬಾಗಿಲು ಮುರಿದು ಒಳನುಗ್ಗಿ ಕಪಾಟುಒಡೆದು ಕೃತ್ಯವೆಸಗಿದ್ದಾರೆ. ಸದಾನಂದ ಆಟೋರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದು, ದಾದಿಯಾಗಿರುವ ಇವರ ಪತ್ನಿ ಆಸ್ಪತ್ರೆಗೆ ಕರ್ತವ್ಯಕ್ಕೆ ಹಾಗೂ ಪುತ್ರ ಶಾಲೆಗೆ ತೆರಳಿದ್ದ ವೇಳೆ ಮನೆಗೆ ಕಳ್ಳರು ನುಗ್ಗಿದ್ದಾರೆ.
ಸದಾನಂದ ಮನೆಗೆ ವಾಪಸಾದಾಗ ಕಳವು ಬೆಳಕಿಗೆ ಬಂದಿದೆ. ಈ ಬಗ್ಗೆ ಸದಾನಂದ ನೀಡಿದ ದೂರಿನಂತೆ ಆದೂರು ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


