ಕಾಸರಗೋಡು: ಬೋವಿಕ್ಕಾನ ಜಂಕ್ಷನ್ ಸನಿಹ ಜೀಪು ಮತ್ತುಬೈಕ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಸವಾರ ಬದಿಯಡ್ಕದ ಬೋಳುಕಟ್ಟೆ ಅಕ್ಷಯ್‍ಕೃಷ್ಣನ್ (23) ಮತ್ತು ಜೀಪ್ ಪ್ರಯಾಣಿಕ ಕಲ್ಲಕಟ್ಟ ಬಾರಿಕ್ಯಾಡಿನ ನಿಖೇಶ್ (26) ಗಾಯಾಳುಗಳು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡಿನ ಯೋಗೀಶ್ ಎಂಬವರ ನತೃತ್ವದಲ್ಲಿ ತಲಕಾವೇರಿ ಕ್ಷೇತ್ರ ದರ್ಶನಕ್ಕೆ ತೆರಳುವ ಮಧ್ಯೆ ಅಪಘಾತವುಂಟಾಘಿದೆ. ಈ ಸಂದರ್ಭ ಜೀಪುಪಲ್ಟಿಯಾಗಿ ಹಿಂಬದಿ ಸೀಟಲ್ಲಿ ಕುಳಿತಿದ್ದ ನಿಕೇಶ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ಇನ್ನೊಂದುಅಪಘಾತದಲ್ಲಿ ನಯಮರ್‍ಮೂಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧರೆಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾದ್ದು, ಇದರಲ್ಲಿಪ್ರಯಾಣಿಸುತ್ತಿದ್ದ ಮೂರು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

